ಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಪೊಲೀಸರ ಹೊಡೆತಕ್ಕೂ ಬಗ್ಗದೆ, ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ನಲ್ಲಿ ನೀಡಿರುವ ಭರವಸೆಗೂ ಜಗ್ಗದ ಯುವ ಸಮೂಹ ಧರಣಿಯನ್ನು ಮುಂದುವರಿಸಿದೆ.ಪೊಲೀಸರು ಲಾಠಿಚಾರ್ಜ್‌ ಮಾಡಿದರೂ, ಅಶ್ರುವಾಯು ಸಿಡಿಸಿದರೂ ಕ್ಯಾರೇ ಅನ್ನದ ಜೆನ್‌ ಝೀಗಳು ತಮ್ಮದೇ ಯೋಜನೆಯಂತೆ ಪ್ರತಿಭಟನಾ ಸ್ಥಳದಲ್ಲಿ ನೆರೆದಿದ್ದಾರೆ.ಜೆನ್‌ ಝೀಗಳ ಈ ಮನಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳೂ ನಡೆಯುತ್ತಿವೆ.ಇವೆಲ್ಲದರ ನಡುವೆ, ತರಹೇವಾರಿ ವಿಡಿಯೊಗಳೂ ಹರಿದಾಡಿವೆ. ವ್ಯಕ್ತಿಯೊಬ್ಬರು ಲಖನೌನಿಂದ ಜಿರಳೆ (ಕಾಕ್ರೋಚ್‌) ವೇಷ ತೊಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರು. ಮಾಧ್ಯಮಗಳೊಂದಿಗೆ ಮಾತನಾಡಿರುವ ಇವರು, ‘ನಾನು ವೈದ್ಯಕೀಯ ವಿದ್ಯಾರ್ಥಿ, ಕಾಕ್ರೋಚ್ ಜನತಾ ಪಾರ್ಟಿಯ ಪರವಾಗಿ ಬಂದಿದ್ದೇನೆ’ ಎಂದಿದ್ದಾರೆ.ಇನ್ನೊಬ್ಬ ಯುವಕ ರಸ್ತೆ ಮಧ್ಯದಲ್ಲಿ ಸೊಳ್ಳೆ ಪರದೆ ಹಾಕಿಕೊಂಡು ಒಳಗೆ ಕುಳಿತು ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್‌ ನೋಡುತ್ತಿರುವ ದೃಶ್ಯದ ವಿಡಿಯೊ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಇನ್ನೂ ಕೆಲವು ಯುವಕರು ರಸ್ತೆ ಮಧ್ಯೆಯೇ ರೀಲ್ಸ್‌ ವಿಡಿಯೊ ಮಾಡಿದ್ದಾರೆ.ಅಚ್ಚರಿ ಎಂದರೆ ಪೊಲೀಸರು ಹೊಡೆಯಲು ಬಂದ ತಕ್ಷಣ ಯುವ ಸಮೂಹ ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿದೆ. ಈ ವಿಡಿಯೊಗೆ ಹಲವರು, ‘ ಲಾಠಿ ಚಾರ್ಜ್‌ನಿಂದ 50 ಸೆಕೆಂಡ್‌ ರಕ್ಷಣೆ ಪಡೆಯುತ್ತಿದ್ದಾರೆ’ ಎಂದು ಕಮೆಂಟ್‌ ಮಾಡಿದ್ದಾರೆಪೊಲೀಸರು ರಸ್ತೆ ಮೇಲೆ ಸಾಲಾಗಿ ಇಟ್ಟ ಬ್ಯಾರಿಕೇಡ್‌ಗಳ ಮೇಲೇಯೇ ಹತ್ತಿ ಆಟವಾಡುತ್ತಿರುವ, ಬ್ಯಾರಿಕೇಡ್‌ಗಳನ್ನು ಮಧ್ಯವಿಟ್ಟು ಶೆಟಲ್‌ಕಾಕ್ ಆಡುತ್ತಿರುವ ವಿಡಿಯೊಗಳೂ ಹರಿದಾಡಿವೆ.

Leave a Reply

Your email address will not be published. Required fields are marked *

Join WhatsApp Group
error: Content is protected !!