ಪುತ್ತೂರು: ದರ್ಬೆಯಲ್ಲಿ ನಿನ್ನೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡು ಪುತ್ತೂರಿನ ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುವನ್ನು ಶಾಸಕ ಅಶೋಕ್ ರೈ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.ಬಳಿಕ ಘಟನೆಯ ಕುರಿತು ಗಾಯಾಳುವಿನಿಂದ ಮಾಹಿತಿ ಪಡೆದುಕೊಂಡ ಶಾಸಕ ಅಶೋಕ್ ರೈ ಅವರು, ಅಗತ್ಯ ಚಿಕಿತ್ಸೆಯ ಬಗ್ಗೆ ವೈದ್ಯರಿಂದಲೂ ಮಾಹಿತಿ ಪಡೆದರು. ಘಟನೆಯ ಸಂಪೂರ್ಣ ವಿವರಗಳನ್ನು ತಿಳಿದುಕೊಂಡರು.











