ಪುತ್ತೂರು: ಜೆಸಿಐ ವಲಯ 15ರ ‘ಸಾಧನಾ ಶ್ರೀ’ ಪ್ರಶಸ್ತಿಗೆ ಪುತ್ತೂರು ಜೆಸಿಐ ಸದಸ್ಯ ಹಾಗೂ ಟಿವಿ ಕ್ಲಿನಿಕ್ ಮಾಲೀಕ ಸತ್ಯಶಂಕರ್ ಆಯ್ಕೆಯಾಗಿದ್ದಾರೆ.ಮಡಂತ್ಯಾರಿನ ಕಲಾ ಸಭಾಂಗಣದಲ್ಲಿ ಆ. 23ರಂದು ನಡೆಯಲಿರುವ ‘ಮೃದಿನಿ ವ್ಯವಹಾರ ಸಮ್ಮೇಳನ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಐಟಿಸಿ ಡಿಪ್ಲೊಮಾ ವ್ಯಾಸಂಗದ ಬಳಿಕ 2000ರಲ್ಲಿ ಟೆಲಿವಿಷನ್ ಕ್ಷೇತ್ರಕ್ಕೆ ಪ್ರವೇಶಿಸಿದ ಸತ್ಯಶಂಕರ್, ತಾಂತ್ರಿಕ ನೈಪುಣ್ಯ, ಕಠಿಣ ಪರಿಶ್ರಮ ಹಾಗೂ ಉದ್ಯಮಶೀಲತೆಯ ಮೂಲಕ 2010ರಲ್ಲಿ ಟಿವಿ ಕ್ಲಿನಿಕ್ ಆರಂಭಿಸಿದರು.2008ರಲ್ಲಿ ಕೇಶವ ಪ್ರಸಾದ್ ಮುಳಿಯ ಹಾಗೂ ಸಹೋದರ ಪಶುಪತಿ ಶರ್ಮಾ ಅವರ ಪ್ರೋತ್ಸಾಹದಿಂದ ಜೆಸಿಐ ಚಳವಳಿಗೆ ಸೇರ್ಪಡೆಯಾದರು. ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ನ ಸದಸ್ಯರೂ ಆಗಿದ್ದಾರೆ.ವೃತ್ತಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಸತ್ಯಶಂಕರ್, ಜೆಸಿಐ ಫೌಂಡೇಷನ್‌ಗೆ ದೇಣಿಗೆ ನೀಡಿ ಜೆಎಫ್‌ಡಿ ಪದವಿ ಪಡೆದಿದ್ದಾರೆ.ಕುಳಮರ್ವ ವೆಂಕಟರಮಣ ಭಟ್ ಹಾಗೂ ರತ್ನಾವತಿ ದಂಪತಿ ಪುತ್ರರಾದ ಸತ್ಯಶಂಕರ್ ಅವರ ಸಾಧನೆಯ ಹಿಂದೆ ಪತ್ನಿ ಸ್ಮಿತಾ ಶಂಕರ್ ಅವರ ಸಹಕಾರವೂ ಇದೆ.











