ಮಠ: ಮಠ ಬದ್ರಿಯಾ ಜುಮಾ ಮಸೀದಿಯಿಂದ ಕೂಟೇಲ್ ದರ್ಗಾ ಶರೀಫ್‌ವರೆಗೆ ಮುಸ್ಲಿಂ ಬಾಂಧವರು ಭವ್ಯ ಮೆರವಣಿಗೆಯಲ್ಲಿ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಮಠ ಮಸೀದಿ ಅಧ್ಯಕ್ಷ ಎಂ.ಕೆ. ಆಸಿಫ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಸೀದಿಯ ಖತೀಬ್ ಸಯ್ಯದ್ ಮೊಹಮ್ಮದ್ ಇಂಬಿಚ್ಚಿಕೋಯ ತಂಙಳ್ ದುವಾ ನೆರವೇರಿಸಿದರು.ಬಳಿಕ ಕುವತುಲ್ ಇಸ್ಲಾಂ ಮದರಸದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ಸ್ಥಳೀಯರಾದ ನಜೀರ್ ಮಠ, ಆದಂ ಕೊಪ್ಪಳ, ನಾಸಿರ್ ವೈಯನ್ಕೆ, ಮುಸ್ತಫಾ ಕೆ.ಪಿ., ಸಿರಾಜ್ ಸಖಾಫಿ, ರಶೀದ್ ಯು.ಎಂ., ಮುಸ್ತಫಾ ಜೆಸಿಬಿ, ಯಂಗ್ ಮೆನ್ಸ್ ಅಧ್ಯಕ್ಷ ಸಾಬಿತ್ ಮಠ, ರಶೀದ್ ಎಚ್.ಎನ್., ಅಧ್ಯಾಪಕರು ಹಾಗೂ ಊರಿನವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!