ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ ಹಾಗೂ ವಿಟ್ಲ ಜೆಸಿಸ್ ಪ್ರೌಢಶಾಲೆ, ವಿಟ್ಲ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ 17ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.ಬೆಥನಿ ಶಾಲೆಯ ಜುವೆನ್ ಡ್ಯಾಸೆಲ್ ಕುಟಿನ್ಹಾ, ಸನ್ನಿಧಿ, ಹಾರ್ದಿಕ ಪಿ., ಜೆನಿಟ ಸಿಂಧು ಪ್ರಸನ್ನ, ಧನ್ಯಶ್ರೀ, ಜನನಿ ಪಿ. ಗೌಡ, ಆಯಿಷತ್ ಶಹೀಮಾ, ಫಾತಿಮತ್ ಅಫ್ರಾ ಹಾಗೂ ಹೆಚ್. ನಮೃತಾ ಶೆಟ್ಟಿ ಉತ್ತಮ ಪ್ರದರ್ಶನ ನೀಡಿದರು.ತಂಡದ ಜುವೆನ್ ಡ್ಯಾಸೆಲ್ ಕುಟಿನ್ಹಾ ಅವರು ಸವ್ಯಸಾಚಿ ಆಟಗಾರ್ತಿ ಪ್ರಶಸ್ತಿ ಹಾಗೂ ಸನ್ನಿಧಿ ಅವರು ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಪಡೆದುಕೊಂಡರು.ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ಅವರು ತಂಡಕ್ಕೆ ತರಬೇತಿ ನೀಡಿದ್ದಾರೆ.











