ಪುತ್ತೂರು: ಪಂಜಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ 42 ವರ್ಷದ ಪುರುಷೋತ್ತಮ ಎಂಬವರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಸಹಕರಿಸುವಂತೆ ಪುತ್ತೂರು ನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪುರುಷೋತ್ತಮ ಅವರು ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಪಜಿರೋಡಿ ನಿವಾಸಿಯಾಗಿದ್ದು, ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರ ಮೂಲ ಮನೆ ಸುಳ್ಯ ತಾಲೂಕಿನ ಪಂಜದ ಕರಿಕ್ಕಳದಲ್ಲಿದೆ. ಅ. 12ರಂದು ಬೆಳಿಗ್ಗೆ ಪಂಜಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ ಅವರು ಬಳಿಕ ಮನೆಗೆ ವಾಪಸಾಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ಪತ್ನಿ ರುಕ್ಕಿಣಿ ಅವರು ನೀಡಿದ ದೂರಿನ ಆಧಾರದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನಾಪತ್ತೆಯಾದವರ ಚಹರೆ:
ಹೆಸರು: ಪುರುಷೋತ್ತಮ ವಯಸ್ಸು: 42 ವರ್ಷಎತ್ತರ: ಸುಮಾರು 5 ಅಡಿಮೈಬಣ್ಣ: ಎಣ್ಣೆ ಕಪ್ಪುಮೈಕಟ್ಟು: ಸಾಧಾರಣಕೂದಲು: ಕಪ್ಪುಧರಿಸಿದ್ದ ಉಡುಪು: ಆಕಾಶ ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ಭಾಷೆಗಳು: ತುಳು, ಕನ್ನಡ ಮತ್ತು ಮಲಯಾಳಂಪುರುಷೋತ್ತಮ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.










