ಸುಳ್ಯ: ಕೇರಳದ ಎರ್ನಾಕುಲಂ ಜಿಲ್ಲೆಯ ನೆಡುಂಬಾಶೇರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕನಕಮಜಲು ಸುಣ್ಣಮೂಲೆ ನಿವಾಸಿ ಇಯಾಸ್ ಅವರ ಮನೆಗೆ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ SDPI ಮಂಗಳೂರು ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಕಲಾಂ ಸುಳ್ಯ, ಜಿಲ್ಲಾ ಸಮಿತಿ ಸದಸ್ಯ ಸಿದ್ದೀಕ್ ಅರಕ್ಕಾಡಿ, ಸುಳ್ಯ ತಾಲೂಕು ಅಧ್ಯಕ್ಷ ಮಿರಾಜ್ ಸುಳ್ಯ, ಸದಸ್ಯರಾದ ಅಬ್ದುಲ್ಲ ಅಡ್ಕಾರ್, ಕಲಂದರ್ ಅರಂಬೂರು, ಷರೀಫ್ ನಿಂತಿಕ್ಕಲ್ ಹಾಗೂ ಕಬೀರ್ ಅರಂಬೂರು ಉಪಸ್ಥಿತರಿದ್ದರು.









