ವಿಟ್ಲ: ಸಹೋದರನ ಮಗಳ ಮನೆಯ ಬಳಿ ಗಲಾಟೆ – ಹರಿತವಾದ ಆಯುಧದಿಂದ ಚುಚ್ಚಿ ವ್ಯಕ್ತಿ ಕೊಲೆ
ವಿಟ್ಲ: ಸಹೋದರನ ಮಗಳ ಮನೆಯ ಬಳಿ ಗಲಾಟೆ ನಡೆಸುತ್ತಿದ್ದ ವೇಳೆ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮದ ನಂದರಬೆಟ್ಟುವಿನಲ್ಲಿ ನ.24ರಂದು ರಾತ್ರಿ ನಡೆದಿದೆ.
ಮೃತರನ್ನು ಚೆನ್ನಯ್ಯ ಪೂಜಾರಿ (ಅಂದಾಜು 45–50) ಎಂದು ಗುರುತಿಸಲಾಗಿದೆ.
ನ.24ರಂದು ರಾತ್ರಿ ಸುಮಾರು 7 ಗಂಟೆಗೆ ಚೆನ್ನಯ್ಯ ಪೂಜಾರಿ ಅವರು ತಮ್ಮ ಸಹೋದರನ ಮಗಳು ವಾಸವಿದ್ದ ಮನೆಯ ಬಳಿ ಗಲಾಟೆ ನಡೆಸುತ್ತಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ಸಹೋದರನ ಮಗಳು ಹರಿತವಾದ ಸಾಧನದಿಂದ ಚುಚ್ಚಿದ್ದಾಳೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಗಾಯದ ತೀವ್ರತೆಯಿಂದ ಚೆನ್ನಯ್ಯ ಪೂಜಾರಿ ಮೃತಪಟ್ಟಿದ್ದಾರೆ. ಈ ಕುರಿತು ದೂರು ಸ್ವೀಕರಿಸಿರುವ ವಿಟ್ಲ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!