ವಾ ರಣಾಸಿ: ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಯನ್ನು ತೆರವುಗೊಳಿಸುವ ಅಭಿಯಾನಕ್ಕೆ ಚಾಲಕ್ಕೆ ನೀಡಿದ್ದ ಸನಾತನ ರಕ್ಷಣಾ ದಳದ ಮುಖ್ಯಸ್ಥ ಅಜಯ್ ಶರ್ಮರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲಖನೌನ ಪ್ರಸಿದ್ಧ ಬಡಾ ಗಣೇಶ ದೇವಸ್ಥಾನ ಸೇರಿದಂತೆ 14 ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಯನ್ನು ತೆರವುಗೊಳಿಸಲಾಗಿದ್ದು, ಇನ್ನೂ 50 ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆರವುಗೊಳಿಸಲಾಗುವುದು ಎಂದು ಅಜಯ್ ಶರ್ಮ ಘೋಷಿಸಿದ್ದರು.

ಸಂಬಂಧ ಶಾಂತಿ ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಅಜಯ್ ಶರ್ಮರನ್ನು ವಶಕ್ಕೆ ಪಡೆಯಲಾಗಿದೆ ಎಂದು ವಾರಾಣಸಿ ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸ್ವಾಲ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆರವುಗೊಳಿಸುವ ಅಜಯ್ ಶರ್ಮರ ನಡೆಯನ್ನು ಭಕ್ತರು ವಿರೋಧಿಸಿದ್ದು, ದೇವಸ್ಥಾನಗಳ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಸಂಬಂಧ ಬುಧವಾರ ನಡೆದಿದ್ದ ಸಾಯಿಬಾಬಾ ಮಂದಿರಗಳ ವ್ಯವಸ್ಥಾಪಕರ ಸಭೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲು ತೀರ್ಮಾನಿಸಲಾಗಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!