
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಕ್ಕಿದ್ದು, ಈ ಹಿನ್ನಲೆಯಲ್ಲಿ ನಡೆಸಿದ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಹಲವು ಪರಿಹಾರ ಕಾರ್ಯಗಳನ್ನು ನಡೆಸುವಂತೆ ಸೂಚನೆ ಸಿಕ್ಕಿತ್ತು. ಅದರಂತೆ ಮಾ.8ರಿಂದ ಪ್ರಾರಂಭಗೊಂಡಿದ್ದ ವಿವಿಧ ಪರಿಹಾರ ಕಾರ್ಯಕ್ರಮಗಳು ಮಾ.14ರಂದು ಆಶ್ಲೇಷಬಲಿ ಮತ್ತು ಮುಷ್ಟಿ ಕಾಣಿಕೆ ಸಮರ್ಪಣೆಯೊಂದಿಗೆ ಪೂರ್ಣಗೊಂಡಿದೆ.
ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಪ್ರಧಾನ ಅರ್ಚಕರಾದ ವೇ. ಮೂ. ವಸಂತಕೆದಿಲಾಯ, ವೇ.ಮೂ.ವಿ.ಎಸ್. ಭಟ್ ವಹಿಸಿದ್ದರು.
ಅಘೋರ ಹೋಮ, ಭಾದೋಚ್ಚಾಟನೆ, ವನದುರ್ಗಾಹೋಮ, ಸಾಮೂಹಿಕ ಪ್ರಾರ್ಥನೆ, ದೈವ ತಂಬಿಲ, ಸರ್ಪಸಂಸ್ಕಾರ, ಮಾ.14ರಂದು ಮೂಲ ನಾಗ ಸನ್ನಿಧಿಯಲ್ಲಿ ಅಶ್ಲೇಷ ಬಲಿ, ಬ್ರಹ್ಮಚಾರಿ ಆರಾಧನೆ ನಡೆದ ಬಳಿಕ ಶ್ರೀ ದೇಗುಲದಲ್ಲಿ ಮಧ್ಯಾಹ್ನ ಪೂಜೆಯ ಮುಂದೆ ಮುಷ್ಟಿಕಾಣಿಕೆ ಅರ್ಪಿಸಲಾಯಿತು.
ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸಮಿತಿ ಸದಸ್ಯರಾದ ವಿನಯ್ ಸುವರ್ಣ, ಮಹಾಬಲ ರೈ ವಳತ್ತಡ್ಕ ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಪ್ಪಾಡಿ, ಈಶ್ವರ ಬೇಡೆಕರ್, ದಿನೇಶ್ ಪಿ.ವಿ, ನಳಿನಿ ಪಿ. ಶೆಟ್ಟಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
