ಮಂಗಳೂರು  : ಮಂಗಳೂರಿನ ಯಮಸ್ವರೂಪಿ ಬಸ್ ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದದಲ್ಲಿ ಖಾಸಗಿ ಬಸ್ಸೊಂದರ ಅತೀ ವೇಗ ಹಾಗೂ ಅಜಾಗರುಕತೆ ಚಾಲನೆ ನಡೆಸುತ್ತಿದ್ದ ಹಿನ್ನಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಚಾಲಕನ ಓವರ್ ಟೇಕ್ ಅಟ್ಟಹಾಸ! ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಯಾಣಿಕರು ಸುರಕ್ಷತೆಯನ್ನು ಲೆಕ್ಕಿಸದೆ ನಿರ್ಲಕ್ಷ್ಯತನದಿಂದ ಎದೆ ಝಲ್ಲೆನಿಸುವಂತೆ ಮಾಡಿದ್ದ ಬಸ್ ನ ಓವರ್ ಸ್ಪೀಡ್ ವಿಡಿಯೋಗಳು ಇದೀಗ ವೈರಲ್‌ ಆಗಿದೆ. ಮಂಗಳೂರು -ಮೂಡಬಿದ್ರೆ ರೂಟ್ ನಲ್ಲಿ ಸಂಚಾರಿಸುತ್ತಿದ್ದ ಜೈನ್ ಟ್ರಾವೆಲ್ಸ್ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಅಪಾಯಕಾರಿ ಚಾಲನೆ ಜೊತೆಗೆ ಓವರ್ ಟೇಕ್ ಮಾಡಲು ಏಕರೂಪದ ರಸ್ತೆಯಲ್ಲಿ ಚಲಾಯಿಸಿ ಸರ್ಕಸ್, ಶಾಲಾ ಮಕ್ಕಳ ರಿಕ್ಷಾಕ್ಕೆಡಿಕ್ಕಿ ಸೇರಿದಂತೆ ಹಲವು ಅಪಘಾತಗಳಿಗೆ ಕಾರಣವಾಗಿದೆ. ಇನ್ನು ಈ ಬಸ್‌ನಲ್ಲಿ ಪ್ರಯಾಣಿಕರು ಪ್ರಾಣ ಕೈಯಲ್ಲಿ ಹಿಡಿದು ಪ್ರಯಾಣಿಸುತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಬಸ್ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಸಾರ್ವಜನಿಕರ ಆಕ್ರೋಶದ ಹಿನ್ನಲೆ ಮೂಡಬಿದ್ರೆ ಪೊಲೀಸರು ಬಸ್‌ನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!