ನವದೆಹಲಿ(ಅ.10): ಕೈಗಾರಿಕಾ ದಿಗ್ಗಜ ರತನ್ ಟಾಟಾ ಅವರ ಧ್ವನಿ ಶಾಶ್ವತವಾಗಿ ಮೌನಕ್ಕೆ ಜಾರಿದೆ. ಅವರ ನಿಧನವು ಇಡೀ ಜಗತ್ತಿಗೆ ತೀವ್ರ ದುಃಖ ತಂದಿದೆ. ರತನ್ ಟಾಟಾ ಅವರು ತಮ್ಮ ಜೀವನದ ಕೊನೆಯ ದಿನಗಳಲ್ಲಿಯೂ ಸಕ್ರಿಯರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಬಹಳಷ್ಟು ಆಕ್ಟಿವ್ ಆಗಿದ್ದರು.

ಕೆಲವು ದಿನಗಳ ಹಿಂದೆ, ಅವರ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ಬೆಳಕಿಗೆ ಬಂದಾಗ, ರತನ್ ಟಾಟಾ ಅವರೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಅವರ ಕೊನೆಯ ಪೋಸ್ಟ್ ಆಗಿತ್ತು. ಸದ್ಯ ಇದು ಭಾರೀ ವೈರಲ್ ಆಗುತ್ತಿದೆ.

ತಮ್ಮ ಕೊನೆಯ ಪೋಸ್ಟ್‌ಗೆ ನನ್ನ ಬಗ್ಗೆ ಯೋಚಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಶೀರ್ಷಿಕೆ ನೀಡಿದ್ದ ರತನ್ ಟಾಟಾ, ಈ ಬಗ್ಗೆ ಮತ್ತಷ್ಟು ಬರೆದುಕೊಂಡಿದ್ದರು. ನನ್ನ ಆರೋಗ್ಯದ ಬಗ್ಗೆ ಇತ್ತೀಚಿನ ವದಂತಿಗಳ ಬಗ್ಗೆ ನನಗೆ ತಿಳಿದಿದೆ ಮತ್ತು ಈ ವಿಚಾರ ಆಧಾರರಹಿತವೆಂದು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ನನ್ನ ವಯಸ್ಸು ಮತ್ತು ಸಂಬಂಧಿತ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ನಾನು ಪ್ರಸ್ತುತ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ. ಚಿಂತಿಸುವಂತಹ ಯಾವುದೇ ವಿಚಾರವಿಲ್ಲ. ನಾನು ಉತ್ತಮ ಮನಸ್ಥಿತಿಯಲ್ಲಿದ್ದೇನೆ ಮತ್ತು ಸಾರ್ವಜನಿಕರು ಮತ್ತು ಮಾಧ್ಯಮಗಳು ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಯಬೇಕೆಂದು ವಿನಂತಿಸುತ್ತೇನೆ ಎಂದಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!