ಪುತ್ತೂರು :ಕಾಂಗ್ರೇಸ್‍  ಮುಖಂಡ ಬಿ.ಕೆ ಹರಿಪ್ರಸಾದ್  ಪೇಜಾವರ ಶ್ರೀಗಳನ್ನು  ಪುಡಿ ರಾಜಕಾರಣಿ ಎಂಬ ಹೇಳಿಕೆಯನ್ನು ಹಿಂದೂ ಸಮಾಜ ತೀವ್ರ ಖಂಡಿಸುತ್ತದೆ.

ಈ ರೀತಿಯ ಹೇಳಿಕೆಗಳನ್ನು ನೀಡಿ ಸಂಪ್ರದಾಯ ಮತ್ತು ನಂಬಿಕೆಗಳಿಗೆ ದ್ರೋಹ ಎಸಗುತ್ತಿರುವ ಬಿ.ಕೆ ಹರಿಪ್ರಸಾದ್ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡುವುದು ಸೂಕ್ತ,ಪೂರ್ವಾಗ್ರಹ ಪೀಡಿತರಾಗಿ  ಈ ರೀತಿಯಾಗಿ ಮಾತನಾಡಿ  ಸಮಾಜದಲ್ಲಿ ಶಾಂತಿ ಕೆದಡುವ ಪ್ರಯತ್ನವಿದು. ಹಿಂದೂ ಸಮಾಜಕ್ಕೆ ಪ್ರಾತಸ್ಮರಣಿಯರಾಗಿರುವ ಶ್ರೀಗಳಿಗೆ ಈ ರೀತಿಯ ಹೇಳಿಕೆ ನೀಡಿರುವುದು ಸಮಸ್ತ ಹಿಂದೂ  ಸಮಾಜಕ್ಕೆ  ಮಾಡಿರುವ ಅವಮಾನ ಬಿ.ಕೆ ಹರಿಪ್ರಸಾದ್ ಸ್ವಾಮಿಜೀಯವರಲ್ಲಿ ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ಮುಂದೆ ನಡೆಯುವ ಎಲ್ಲಾ ಬೆಳವಣಿಗೆಗಳಿಗೆ ಅವರೇ ಕಾರಣರಾಗುತ್ತಾರೆಂದು ಈ ಮೂಲಕ ತಿಳಿಸುತ್ತೇವೆ  ಎಂದು ಅರುಣ್ ಕುಮಾರ್ ಪುತ್ತಿಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!