
ಡೆ ಹ್ರಾಡೂನ್ ನಲ್ಲಿ ಕಾರು ಅಪಘಾತವಾಗಿ ಆರು ವಿಧ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆಗೆ ಸಂಬಂಧಪಟ್ಟಂತೆ ಬಿಗ್ ಟ್ವಿಸ್ಟ್ ವೊಂದು ಸಿಕ್ಕಿದ್ದು, ಅಪಘಾತಕ್ಕೂ ಮುನ್ನ ವಿದ್ಯಾರ್ಥಿಗಳು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ನವೆಂಬರ್ 11 ರಂದು ಮಧ್ಯರಾತ್ರಿ 7 ಜನ ವಿಧ್ಯಾರ್ಥಿ – ವಿದ್ಯಾರ್ಥಿನಿಯರು ಕಂಠಪೂರ್ತಿ ಕುಡಿದು, ಮೋಜು ಮಸ್ತಿ ಮಾಡಿ, ಬಳಿಕ ಇನ್ನೋವಾ ಕಾರಿನಲ್ಲಿ ಸುತ್ತಾಡಲು ತೆರಳಿದ್ದು, ನ.12 ರಂದು ಮುಂಜಾನೆ 1.30ರ ವೇಳೆ ಕಾರು ವೇಗವಾಗಿ ಬಂದು ಟ್ರಕ್ ಗೆ ಡಿಕ್ಕಿ ಹೊಡೆದಿದೆ.
ಇದೀಗ 7 ಜನ ವಿದ್ಯಾರ್ಥಿಗಳು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದ್ದು, ಪಾರ್ಟಿಯ ಬಳಿಕ ಸ್ನೇಹಿತರ ಗುಂಪು ಬಿಎಂಡಬ್ಲ್ಯೂ ಕಾರಿನೊಂದಿಗೆ ರೇಸಿಂಗ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಚಾಲಕ ಅತುಲ್ ಬಿಎಂಡಬ್ಲ್ಯೂ ಕಾರನ್ನು ಹಿಂದಿಕ್ಕಲು ಗಂಟೆಗೆ 100 ಕಿಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಕಾರು ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಪರಿಣಾಮ ಕಾರಿನಲ್ಲಿದ್ದ ಹಿಮಾಚಲ ಪ್ರದೇಶ ಮೂಲದ ಕುನಾಲ್ ಕುಕ್ರೇಜಾ (23), ಡೆಹ್ರಾಡೂನ್‌ನ ಅತುಲ್ ಅಗರವಾಲ್ (24), ರಿಷಭ್ ಜೈನ್ (24), ನವ್ಯಾ ಗೋಯೆಲ್ (23), ಕಾಮಾಕ್ಷಿ (20), ಮತ್ತು ಗುನೀತ್ (19) ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಿದ್ಧೇಶ್ ಅಗರವಾಲ್ (25) ಗಂಭೀರ ಗಾಯಗೊಂಡಿದ್ದಾನೆ.
ಸದ್ಯ ಗಾಯಾಳು ನಗರದ ಸಿನರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ನ್ನೋವಾ ಸಹರಾನ್‌ಪುರದ ಪಟಾಕಿ ಉದ್ಯಮಿ ಸುನಿಲ್ ಅಗರ್ವಾಲ್ ಅವರಿಗೆ ಸೇರಿದ್ದು, ಅವರು ಧನ್ತೇರಸ್‌ನಲ್ಲಿ ಕೆಲವೇ ದಿನಗಳ ಮೊದಲು ವಾಹನವನ್ನು ಖರೀದಿಸಿದ್ದರು ಎನ್ನಲಾಗಿದೆ.








