
ಮೇ ತಿಂಗಳ ಕೊನೆಯ ತನಕ ದೇಶಾದ್ಯಂತ ಲಕ್ಷಾಂತರ ಮಂದಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅದು ಪ್ರೇಮ ವಿವಾಹವಾಗಲಿ (Love Marraige) ಅಥವಾ ಅರೇಂಜ್ ಮ್ಯಾರೇಜ್ ಆಗಲಿ, ಬಹಳಷ್ಟು ಮಂದಿ ಸಂಸಾರಿಕ ಜೀವನಕ್ಕೆ ಕಾಲಿಡುತ್ತಾರೆ.
ಕುಟುಂಬ ಸದಸ್ಯರನ್ನು ಒಪ್ಪಿಸಿ ಮದುವೆಯಾಗುವುದು ಸಾಮಾನ್ಯ ಸಂಗತಿ. ಆದರೆ ಭಾರತದಂತಹ ದೇಶದಲ್ಲಿ ಪ್ರೇಮ ವಿವಾಹ ಅನ್ನೋದು ಇಂದಿಗೂ ಅಘೋಷಿತ ನಿಷೇಧದಂತೆ ಇದೆ. ಒಂದಷ್ಟು ಪೋಷಕರು ನಿಧಾನವಾಗಿ ಲವ್ ಮ್ಯಾರೇಜ್‌ಗೆ ಒಪ್ಪಿಗೆ ನೀಡುತ್ತಾರಾದರೂ ಬಹಳಷ್ಟು ಸಂಖ್ಯೆಯಲ್ಲಿ ಲವ್ ಮ್ಯಾರೇಜ್ ಪೋಷಕರ ವಿರೋಧದ ಕಾರಣದಿಂದ ಸಕ್ಸಸ್ ಆಗೋದು ಬಹಳಷ್ಟು ಕಡಿಮೆ. ಆದರೆ ಇಲ್ಲೊಂದು ಕಡೆ ಮಗಳು ಲವ್ ಮ್ಯಾರೇಜ್ ಆದಳು ಅನ್ನೋ ಕಾರಣಕ್ಕೆ ಅಚ್ಚರಿಯ ಘಟನೆಯೊಂದು ನಡೆದಿದೆ.
ಹೌದು.. ಪೋಷಕರ ಮಾತನ್ನು ಧಿಕ್ಕರಿಸಿ ತನ್ನ ಪ್ರೇಮಿಯನ್ನೇ ಮದುವೆಯಾದ ಮಗಳ ನಿರ್ಧಾರದಿಂದ ಬೇಸತ್ತ ತಂದೆಯೊಬ್ಬರು ಆಕೆಯ ಮದುವೆ ಹಾಲ್‌ನಲ್ಲೇ ತಿಥಿ ಕಾರ್ಡ್ ಹಂಚಿದ ಅಪರೂಪದ ಘಟನೆಯೊಂದು ನಡೆದಿದೆ. ರಾಜಸ್ಥಾನದ ಬೇವಾರ್‌ನಲ್ಲಿ ನೆಲೆಸಿರುವ ತಂದೆಯೊಬ್ಬರು ತಮ್ಮ ಮಗಳ ಹೆಸರಿನಲ್ಲಿ ಇಂಥದ್ದೊಂದು ಕಾರ್ಡ್ ಮುದ್ರಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಅಂದಹಾಗೆ, ತಂದೆ-ತಾಯಿಯ ಇಚ್ಛೆಗೆ ವಿರುದ್ಧವಾಗಿ ಆ ವ್ಯಕ್ತಿಯ ಮಗಳು ತನ್ನ ಲವರ್‌ನೊಂದಿಗೆ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಈ ಬಗ್ಗೆ ತಂದೆ ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ತನ್ನ ಮಗಳನ್ನು ತಮ್ಮ ಜೊತೆ ಕಳಿಸುವಂತೆಯೂ ಕೇಳಿದ್ದರು. ಆದರೆ ಪೊಲೀಸರ ಮುಂದೆ ಆಕೆ ತನ್ನ ಪೋಷಕರನ್ನು ಗುರುತಿಸಲು ನಿರಾಕರಿಸಿದ್ದು, ಅವರು ಯಾರು ಅನ್ನೋದೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾಳೆ.. ಇದರಿಂದ ನೊಂದ ತಂದೆ ತನ್ನ ಜೀವಂತ ಮಗಳು ಸತ್ತಿದ್ದು, ಅವಳ ಶ್ರಾದ್ಧ ಕಾರ್ಯಕ್ಕೆ ಬನ್ನಿ ಎಂದು ಅವಳ ಮದುವೆಯ ದಿನವೇ ಹಾಲ್‌ನಲ್ಲಿ ತಿಥಿ ಕಾರ್ಡ್ ಹಂಚಿದ್ದಾರೆ.
ಬೇವಾರದ ಬದ್ನೂರಿನಲ್ಲಿ ನೆಲೆಸಿರುವ ವಿಮಲಾ ತನ್ನ ಪೋಷಕರ ವಿರೋಧವನ್ನು ಲೆಕ್ಕಿಸದೆ ಮದುವೆಯಾಗಿದ್ದು, ತಂದೆ-ತಾಯಿಯ ವಿರೋಧಕ್ಕೆ ಕ್ಯಾರೇ ಅನ್ನದೆ ಇಷ್ಟು ದೊಡ್ಡ ಹೆಜ್ಜೆ ಇಟ್ಟ ಮಗಳು ಇಲ್ಲಿಗೇ ನಿಲ್ಲಲಿಲ್ಲ. ಅವಳನ್ನು ಕರೆದುಕೊಂಡು ಹೋಗಲು ತಂದೆ-ತಾಯಿ ಬಂದಾಗ ಆಕೆ ಅವರೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಪೊಲೀಸರ ಮುಂದೆ ತನ್ನ ಹೆತ್ತವರನ್ನು ಗುರುತಿಸಲು ನಿರಾಕರಿಸಿದ್ದಾಳೆ.
ತಂದೆಯನ್ನು ಹೆಚ್ಚು ನೋಯಿಸಿದೆ. ತಮ್ಮ ದುಃಖವನ್ನು ಸಂಬಂಧಿಕರೊಂದಿಗೆ ಹಂಚಿಕೊಂಡ ತಂದೆ ಬದುಕಿರುವ ಮಗಳು ನನ್ನ ಪಾಲಿಗೆ ಸತ್ತಳು ಎಂದು ತಿಥಿ ಕಾರ್ಡ್ ಮಾಡಿಸಿದ್ದಾರೆ.
ಮೂಲಗಳ ಪ್ರಕಾರ, ಪೋಷಕರು ತಮ್ಮ ಮಗಳನ್ನು ತುಂಬಾ ಕಷ್ಟಪಟ್ಟು ಬೆಳೆಸಿದ್ದಾರೆ. ಮಗಳನ್ನು ಬಿ.ಇಡಿ ದ ನಂತರ ಶಿಕ್ಷಕಿಯನ್ನಾಗಿ ಮಾಡಬೇಕೆಂಬ ಕನಸು ಪೋಷಕರದ್ದಾಗಿತ್ತು. ಆದರೆ ಶಿಕ್ಷಣ ಕಲಿಯುತ್ತಿದ್ದಾಗಲೇ ಕದ್ದು ಮುಚ್ಚಿ ಲವ್ ಮಾಡಿದ ಆಕೆ ಪೋಷಕರನ್ನು ವಿರೋಧಿಸಿ ಲವ್ ಮ್ಯಾರಿಜ್ ಆಗಿದ್ದ ಒಂದೆಡೆಯಾದ್ರೆ, ಪೊಲೀಸರ ಮುಂದೆ ತಂದೆ ತಾಯಿಯ ಪರಿಚಯ ಇಲ್ಲ ಎಂದು ಹೇಳಿದ್ದು ಅರ ಹೃದಯ ಒಡೆದಂತಾಗಿದೆ.
ಸದ್ಯ ಬದುಕಿರುವ ಮಗಳ ತಿಥಿ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೋಷಕರ ಕನಸಿಗೆ ತಣ್ಣೀರೆರಚಿದ ಮಗಳ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.






