
ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅಂತಾರೆ.ಆದ್ರೆ ಇಲ್ಲಿ ಹೆತ್ತ ತಾಯಿಯ ಶವದ ಮುಂದೆಯೇ ಮಕ್ಕಳು ಹಣಕ್ಕಾಗಿ ಕಿತ್ತಾಡಿಕೊಂಡ ಘಟನೆ ನಡೆದಿದೆ.
ಅನಂತಕ್ಕ ಎಂಬ ಮಹಿಳೆ ಮೃತಪಟ್ಟಿದ್ದು,ಈ ತಾಯಿಯ ಆರು ಜನ ಮಕ್ಕಳು ತಾಯಿ ನಿಧನರಾದ ದುಃಖ ಪಕ್ಕಕ್ಕಿಟ್ಟು ಆಕೆಯ ಅಕೌಂಟ್ ನಲ್ಲಿದ್ದ ಹಣಕ್ಕಾಗಿ ಕಚ್ಚಾಡಿಕೊಂದಿದ್ದಾರೆ.
ಮಕ್ಕಳ ಈ ಕಚ್ಚಾಟದಿಂದಾಗಿ ತಾಯಿಯ ಶವವನ್ನು ಇಡೀ ರಾತ್ರಿ ಪೊಲೀಸ್ ಠಾಣೆ ಮುಂದೆ ಇರಿಸಿದ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ತಾಯಿಯ ಬಳಿಯಿರುವ ಹಣವನ್ನು ಹಂಚಿಕೆ ಮಾಡುವವರೆಗೂ ತಾಯಿಯ ಶವ ಹೂಳಲು ಅವಕಾಶ ನೀಡದ ಮಕ್ಕಳು ಕಿತ್ತಾಡಿಕೊಂಡಿದ್ದಾರೆ.ಈ ಅಮಾನವೀಯ ಘಟನೆ ನಡೆದಿರೋದು ಚಿಕ್ಕಬಳ್ಳಾಪುರದ ದೊಡ್ಡಕುರುಗೂಡು ಗ್ರಾಮದಲ್ಲಿ.ಅನಂತಕ್ಕ ಅವರಿಗೆ ಸೇರಿದ ಜಮೀನಿನಿಂದ 93,75,000 ರೂಪಾಯಿ ಹಣ ಅವರ ಖಾತೆಗೆ ಬಂದಿತ್ತು.ಈ ಹಣಕ್ಕಾಗಿಯೇ ಮಕ್ಕಳು ಕಿತ್ತಾಡಿಕೊಂಡಿದ್ದಾರೆ.
ಈ ಹಣದಲ್ಲಿ ಕೋರ್ಟ್ ಹೆಣ್ಣು ಮಕ್ಕಳಿಗೆ 40 ಲಕ್ಷ ಹಣ ನೀಡುವಂತೆ ತೀರ್ಪು ನೀಡಿತ್ತು. ಆದ್ರೆ ಗಂಡುಮಕ್ಕಳು ಮಾತ್ರ ಈ ಹಣವನ್ನು ವರ್ಗಾವಣೆ ಮಾಡಿಕಿಂಡಿದ್ದರು. ಹೀಗಾಗಿ ಜಗಳವಾಗಿದೆ. ಇಡೀ ರಾತ್ರಿ ಪೊಲೀಸ್ ಠಾಣೆ ಮುಂದೆ ಶವ ಇಟ್ಟು ಅಮಾನವೀಯವಾಗಿ ವರ್ತನೆ ತೋರಿದ್ದಾರೆ. ಆ ನಂತರ ತಹಶೀಲ್ದಾರ್ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ತಾಯಿಯ ಅಂತ್ಯಕ್ರಿಯೆಗೆ ಮಕ್ಕಳು ಮುಂದಾಗಿದ್ದಾರೆ.
