
ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ವೇಣೂರು ಶಾಖೆಯ ಪವರ್‌ಮ್ಯಾನ್, ನಾರಾವಿ ತುಂಬೆಗುಡ್ಡೆ ನಿವಾಸಿ ಸುಧಾಕರ ಯಾನೆ ಕಿಟ್ಟ (50) ಅಸಹಜವಾಗಿ ಸಾವನ್ನಪ್ಪಿದ ಘಟನೆ ಮಾ.26ರಂದು ಸಂಭವಿಸಿದೆ.
ಕರ್ತವ್ಯದಲ್ಲಿದಲ್ಲಿದ್ದ ಇವರು ಅಂಡಿಜೆ ರಸ್ತೆ ಸಮೀಪದ ವಿದ್ಯುತ್ ಪರಿವರ್ತಕದ ಅಂಚಿನಲ್ಲಿ ನೀರು ಹರಿಯುವ ಚರಂಡಿಯಲ್ಲಿ ಬಿದ್ದಿದ್ದರು.
ಸ್ಥಳೀಯರು ಗಮನಿಸಿ ಇವರನ್ನು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು.
ಈ ವೇಳೆ ಅವರು ಸಾವನ್ನಪ್ಪಿದ್ದಾರುವುದಾಗಿ ಅಲ್ಲಿನ ವೈದ್ಯರು ದೃಢಪಡಿಸಿದರು. ಮೈಮೇಲೆ ಯಾವುದೇ ಗಾಯದ ಕುರುಹುಗಳು ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕವಷ್ಟೆ ಸಾವಿನ ಕಾರಣ ತಿಳಿದು ಬರಬೇಕಿದೆ. ಮೃತರು ಅವಿವಾಹಿತರಾಗಿದ್ದು ತಾಯಿ, ಓರ್ವ ಸಹೋದರ, ಓರ್ವ ಸಹೋದರಿಯನ್ನು ಅಗಲಿದ್ದಾರೆ






