Author: Vidyamaana

ಕೈ ಬೀಸಿ ಕರೆಯುತ್ತಿದೆ….
ಆಕರ್ಷಕ ದೀಪಾಲಂಕಾರ– ಕಣ್ತುಂಬಿಕೊಳ್ಳಿ ಮುಕ್ವೆ ಮಖಾಂ ಉರೂಸ್..
ಇಂದು ರಾತ್ರಿ ಉರೂಸ್ ಸಮಾರಂಭ– ನಾಳೆ ಮಧ್ಯಾಹ್ನ 12ರಿಂದ “ಅನ್ನದಾನ”

ಪುತ್ತೂರು: ಐತಿಹಾಸಿಕ ಹಿನ್ನಲೆಯ ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುವ ಮುಕ್ವೆ ಮಖಾಂ ಉರೂಸ್ ಜ.೨೫ ರಂದು ರಾತ್ರಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಕಳೆದ ಜ.೧೯ರಿಂದ ಪ್ರಾರಂಭಗೊಂಡ ಈ ಉರೂಸ್ ಕಾರ್ಯಕ್ರಮದಲ್ಲಿ ನೂರೇ ಅಜ್ಮೀರ್ ಸಹಿತ ವಿವಿಧ ವಾಗ್ಮಿಗಳಿಂದ ಮತಪ್ರಭಾಷಣ ನಡೆಯಿತು. ಇಂದು…

ಪುತ್ತೂರು :ಡಾ.ವಜಿದಾ ಬಾನು ಗಣರಾಜ್ಯೋತ್ಸವ ಪಥಸಂಚಲನದ ಕಮಾಂಡರ್-ಇನ್-ಚೀಫ್

ಪುತ್ತೂರು:2023ರಲ್ಲಿ ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜಿನ ದ್ವಿತೀಯ ವರ್ಷದ ಎಮ್ ಡಿಎಸ್ ವಿದ್ಯಾರ್ಥಿನಿ ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕಿ ಮೊಟ್ಟೆತ್ತಡ್ಕದ ಡಾ.ವಜಿದಾ ಬಾನು ಅವರು ಈ ಬಾರಿ ಬೆಂಗಳೂರುನಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದ ಕಮಾಂಡರ್-ಇನ್ -ಚೀಫ್ ಆಗಿ…

ಭಾವಿ ವರನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಭಾವಿ ವರನೋರ್ವ ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾದ ಘಟನೆ ಶುಕ್ರವಾರ ಸಂಜೆ ಮೀಂಜ ಸಮೀಪದ ಬೆಜ್ಜದಲ್ಲಿ ನಡೆದಿದೆ. ಮೀಂಜ ಸಮೀಪದ ಬೆಜ್ಜದ ಅಜಿತ್ ಕುಮಾರ್ (28) ಮೃತಪಟ್ಟವರು. ಫೆಬ್ರವರಿ ಎರಡರಂದು ವಿವಾಹ ನಿಗದಿಯಾಗಿತ್ತು. ಸಂಜೆ ಮನೆ ಸಮೀಪದ ಮರ ವೊಂದರಲ್ಲಿ…

ಮೈಕ್ರೋ ಫೈನಾನ್ಸ್ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ನೊಂದ ಜನರು ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ…

ಫೈನಾನ್ಸ್ ಸಾಲ ರಿಕವರಿ ಟೀಂ ಹೆಸರಲ್ಲಿ ಕಿರುಕುಳ: ನಾಲ್ವರು ನಕಲಿ ಸಿಬ್ಬಂದಿಗಳು ಅರೆಸ್ಟ್

ರಾಜ್ಯದಲ್ಲಿ ಒಂದೆಡೆ ಫೈನಾನ್ಸ್ ನವರ ಕಿರುಕುಳ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಮೈ ಕ್ರೋ ಫೈನಾನ್ಸ್ ನವರ ಕಾಟಕ್ಕೆ ಜನರು ಆತ್ಮಹತ್ಯೆಯಂತಹ ದಾರಿ ತುಳಿಯುತ್ತಿದ್ದಾರೆ. ಈ ನಡುವೆ ಇದನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲ ಖತರ್ನಾಕ್ ಗ್ಯಾಂಗ್ ಗಳು ಜನರಿಂದ ಸುಲಿಗೆ, ವಸೂಲಿಗೆ ಇಳಿದಿವೆ. ಫೈನಾನ್ಸ್…

ಇನ್ಸ್ಟಾಗ್ರಾಮ್ನಲ್ಲಿ ಯುವತಿಯ ಫೋಟೋಗೆ ಲೈಕ್ – ನಿಶ್ಚಿತಾರ್ಥ ಮಾಡಿಕೊಂಡ ಯುವತಿಯ ಅನುಮಾನಕ್ಕೆ ಚೇತನ್ ಆತ್ಮಹತ್ಯೆ

ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳ ಪೋಟೋಗೆ ಲೈಕ್ ಮಾಡಿದ್ದನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಪ್ರಶ್ನಿಸಿ ಗಲಾಟೆ ಮಾಡಿದ್ದಕ್ಕೆ ಮನನೊಂದು ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಎಲ್ಪೇಲು ಎಂಬಲ್ಲಿ ನಡೆದಿದೆ. ಮೃತರನ್ನು ಚೇತನ್‌ (25) ಎಂದು…

ಜ. 26:ಕುಂಬ್ರದಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲೆ ವತಿಯಿಂದ ಮಾನವ ಸರಪಳಿ ಕಾರ್ಯಕ್ರಮ

ಪುತ್ತೂರು: ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಗೆ ಸಂಕಲ್ಪ’ ಧೈಯದಲ್ಲಿ ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾದ ವಿದ್ಯಾರ್ಥಿ ಸಂಘಟನೆಯಾಗಿರುವ ಎಸ್‌ಕೆಎಸ್‌ಎಸ್ ಎಫ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಜ.26ರಂದು ಕುಂಬ್ರ ಜಂಕ್ಷನ್‌ನಲ್ಲಿ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಕಾರ್ಯಕ್ರಮ ನಡೆಯಲಿದೆ…

ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ: ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ

ರಾಜ್ಯದಲ್ಲಿ ಒಂದೆಡೆ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚುತ್ತಿದ್ದರೆ, ಇನ್ನೊದೆಡೆ ಮೀಟರ್ ಬಡ್ಡಿ ದಂಧೆಕೋರರ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಮೀಟರ್ ಬಡ್ಡಿ ದಂಧೆಕೋರನೊಬ್ಬ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ನಿತಿನ್ ಆಚಾರ್ಯ ಹಲ್ಲೆಗೊಳಗಾದ ಯಕ್ಷಗಾನ ಕಲಾವಿದ.…

ಸಮಯಕ್ಕೆ ಸರಿಯಾಗಿ ಕಚೇರಿಗೆ ಬನ್ನಿ, ಗುರುತಿನ ಚೀಟಿ ಕಡ್ಡಾಯ: ಅಧಿಕಾರಿಗಳು, ನೌಕರರಿಗೆ ಸರ್ಕಾರ ಸೂಚನೆ

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯದ ಸಮಯದಲ್ಲಿ ಅನುಸರಿಸಬೇಕಿರುವ ಸೂಚನೆಗಳ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸುತ್ತೋಲೆ ಹೊರಡಿಸಿದೆ. ಕೆಲವರು ಕರ್ತವ್ಯದ ಅವಧಿಯಲ್ಲಿ ನಿಯಮ ಪಾಲಿಸದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಅಧಿಕಾರಿಗಳು ಮತ್ತು…

ಇಂದು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‌ನ ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಚುನಾವಣೆ-ಟೌನ್‌ಬ್ಯಾಂಕ್ ಮೇಲಿನ ಆರೋಪದಲ್ಲಿ ಹುರುಳಿಲ್ಲ:ಕಿಶೋರ್ ಕೊಳತ್ತಾಯ

ಪುತ್ತೂರು: ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರಿಂದ ಸ್ಥಾಪನೆಯಾದ, ೧೧೫ ವರ್ಷಗಳ ಇತಿಹಾಸವಿರುವ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‌ನ ಮುಂದಿನ ೫ ವರ್ಷಗಳ ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಜ.೨೫ರಂದು ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಕೇವಲ ರಾಜಕೀಯ ಕಾರಣಕ್ಕೆ…

Join WhatsApp Group
error: Content is protected !!