ಪುತ್ತೂರು: ಪುತ್ತೂರಿನ ಬಹುದೊಡ್ಡ ಹಬ್ಬ ಎಂದೇ ಖ್ಯಾತಿ ಪಡೆದಿರುವ `ಪುತ್ತೂರ ಜಾತ್ರೆ’ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾಮಹೋತ್ಸವ ಎ.೧೦ರಿಂದ ೨೦ ತನಕ ನಡೆಯಲಿದ್ದು, ಈ ಸಂಬAಧ ಬ್ರಹ್ಮರಥ ಸಿದ್ಧಗೊಳಿಸಲು ಸೋಮವಾರ ರಥವನ್ನು ಪೂಜಾವಿಧಿವಿಧಾನಗಳೊಂದಿಗೆ ರಥಬೀದಿಗೆ ತರಲಾಯಿತು. ಈ ಸಂದರ್ಭ ರಥಕಟ್ಟುವ ಸ್ಥಳವನ್ನು ಮಲ್ಲಿಗೆಮಾಲೆ ಭೂಸ್ಪರ್ಶ ಮಾಡುವ ಮೂಲಕ ನಿಗದಿಪಡಿಸಿತು. ರಥಮನೆಯಿಂದ ರಥಬೀದಿಗೆ ಬ್ರಹ್ಮರಥ ಆಗಮನದೊಂದಿಗೆ ಪುತ್ತೂರು ಜನತೆಗೆ ಜಾತ್ರೆ ಆರಂಭಕ್ಕೆ ಕ್ಷಣಗಣನೆ ಆರಂಭವಾಯಿತು ಎಂಬುವುದು ಜನತೆಯ ನಂಬಿಕೆಯಾಗಿದೆ.
ಎ.೧೦ಕ್ಕೆ ಆರಂಭಗೊಳ್ಳುವ ಪುತ್ತೂರು ಜಾತ್ರೋತ್ಸವದಲ್ಲಿ ಎ.೧೭ರಂದು ಬ್ರಹ್ಮರಥೋತ್ಸವ ನಡೆಯಲಿದೆ. ಈ ಜಾತ್ರೋತ್ಸವದಲ್ಲಿ ಸೀಮೆಯ ಭಕ್ತರೂ ಸೇರಿದಂತೆ ದಕ ಜಿಲ್ಲೆಯ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ. ಈ ಜಾತ್ರೆಯಲ್ಲಿ ಬ್ರಹ್ಮರಥೋತ್ಸವಕ್ಕೆ ಮೊದಲು `ಪುತ್ತೂರು ಬೆಡಿ’ ಎಂದೇ ಖ್ಯಾತಿ ಪಡೆದ ವಿಶೇಷ ಸುಡುಮದ್ದು ಪ್ರದರ್ಶನ ನಡೆಯುತ್ತದೆ. ಜನತೆಯ ಭಾವನೆಗಳಿಗೆ ರಂಗು ತುಂಬು ಈ ಬಣ್ಣದ ಚಿತ್ತಾರ ಲಕ್ಷಾಂತರ ಮಂದಿ ಭಕ್ತರ ಮನಸ್ಸನ್ನು ಸೂರೆಗೊಳ್ಳುತ್ತದೆ.
ಬ್ರಹ್ಮರಥಕ್ಕೆ ಧಾರ್ಮಿಕ ವಿಧಿ
ಈ ಹಿಂದಿನ ವರ್ಷಗಳಲ್ಲಿ ಸಾಮಾನ್ಯವಾಗಿ ರಥ ಕಟ್ಟುವ ಸ್ಥಳದಲ್ಲಿ ಬಿಲ್ವಪತ್ರೆ ಭೂಸ್ಪರ್ಶ ಆಗುತ್ತಿತ್ತು. ಆದರೆ ಈ ಬಾರಿ ಬಿಲ್ವಪತ್ರದ ಬದಲಿಗೆ ಮಲ್ಲಿಗೆಮಾಲೆ ಭೂಸ್ಪರ್ಶವಾಗುವ ಮೂಲಕ `ಶ್ರೇಷ್ಠತೆ’ ಕಂಡುಬAದಿದೆ. ಬೆಳಗ್ಗೆ ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ. ವಸಂತ ಕದಿಲಾಯ ಅವರು ಬ್ರಹ್ಮರಥಕ್ಕೆ ಪುಷ್ಪ, ಗಂಧ, ಬಿಲ್ವಪತ್ರೆ, ಕಮಲವನ್ನು ಸಮರ್ಪಣೆ ಮಾಡಿ ವಿಜ್ರಂಭಣೆಯಿAದ ಜಾತ್ರೆ ನಡೆಸಲು ಅನುವು ಮಾಡಿಕೊಡುವಂತೆ ದೇವರನ್ನು ಪ್ರಾರ್ಥಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಗದರ್ಶನದಲ್ಲಿ ಆರಂಭದಲ್ಲಿ ದೇವಳದ ನೌಕರರು ರಥದ ಹಿಂಬದಿಯ ಚಕ್ರಕ್ಕೆ ದಂಡ ಇಟ್ಟು ಚಕ್ರ ಚಾಲನೆ ನೀಡಿದರು. ಬ್ರಹ್ಮರಥವನ್ನು ಕ್ರೆöÊನ್ ಸಹಾಯದಿಂದ ಹೊರಗೆಳೆಯುವ ಕೆಲಸ ನಡೆಸಲಾಯಿತು. ದೇವಾಲಯದ ಕೆಲಸಗಾರರು ಸೇರಿ ಬ್ರಹ್ಮರಥವನ್ನು ರಥಬೀದಿಗೆ ತಂದು ನಿಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ವ್ಯಸಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ಸುಭಾಶ್ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ, ಈಶ್ವರ ಬೇಡೇಕರ್, ದೇವಳದ ತಾಂತ್ರಿಕ ಸಲಹೆಗಾರ ಪಿ.ಜಿ.ಜಗನ್ನೀವಾಸ್ ರಾವ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸಹಿತ ದೇವಳದ ನೌಕರರು ಹಾಗೂ ಭಕ್ತಾಧಿಗಳು ಭಾಗಿಯಾಗಿದ್ದರು.

ಸಕಲ ವ್ಯವಸ್ಥೆಯೊಂದಿಗೆ ಸಿದ್ಧತೆ
ಪುತ್ತೂರು ದೇವಳದ ಮನೆಗಳನ್ನು ತೆರವು ಮಾಡಿದ ಸ್ಥಳದಲ್ಲಿ ಈ ಬಾರಿ ಅನ್ನಪ್ರಸಾದಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುವುದು. ಪುತ್ತೂರು ಬೆಡಿಯನ್ನು ಜನತೆ ಕಣ್ತುಂಬಿಕೊಳ್ಳುವAತೆ ದೇವಳದ ಒಂದು ಭಾಗದಲ್ಲಿ ಸುವ್ಯವಸ್ಥೆ ಕ್ರಮ ಕೈಗೊಳ್ಳಲಾಗುವುದು. ಪ್ರವೇಶದ್ವಾರದ ಬಳಿ ಇರುವ ಮೂರು ಅಂಗಡಿಯ ಕಟ್ಟಡವನ್ನು ಎ.೩೦ರೊಳಗೆ ತೆರವು ಮಾಡಿ ಭಕ್ತಾಧಿಗಳಿಗೆ ಅನುಕೂಲ ಮಾಡಲಾಗುವುದು. ದೇವಳದ ಸುತ್ತಮುತ್ತ ಸ್ವಚ್ಛತೆಗೊಳಿಸಲಾಗುವುದು. ಮೊದಲ ಬಾರಿಗೆ ರಥಕಟ್ಟುವ ಸ್ಥಳದಲ್ಲಿ ಮಲ್ಲಿಗೆಮಾಲೆ ಭೂಸ್ಪರ್ಶ ಆಗುವ ಮೂಲಕ ಈ ಬಾರಿ ಶ್ರೇಷ್ಠತೆ ಕಂಡುಬAದಿದೆ. ಅದ್ದೂರಿಯಾಗಿ ಜಾತ್ರೆ ನಡೆಯಲಿದೆ-ಪಂಜಿಗುಡ್ಡೆ ಈಶ್ವರ ಭಟ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು.

Leave a Reply

Your email address will not be published. Required fields are marked *

Join WhatsApp Group
error: Content is protected !!