ಧಾರ್ಮಿಕ ಆಚರಣೆಗಳಿಗೆ ಮತ್ತು ನಂಬಿಕೆಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವ ಫ್ಯಾಷನ್ ವ್ಯಾಪಕವಾಗಿ ಹೆಚ್ಚುತ್ತಿದೆ. ಆದರೆ ಇದು ಕೇವಲ ಇಂದಿನ ಕಾಲದ ಫ್ಯಾಷನ್ ಅಥವಾ ಟ್ರೆಂಡ್ ಮಾತ್ರವಲ್ಲ, ಇದರ ಹಿಂದೆ ಆಳವಾದ ಧಾರ್ಮಿಕ ನಂಬಿಕೆಗಳು ಹಾಗೂ ವೈಜ್ಞಾನಿಕ ಮತ್ತು ಆರೋಗ್ಯ ಸಂಬಂಧಿ ಕಾರಣಗಳು ಅಡಗಿವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಲಿಗೆ ಕಪ್ಪು ದಾರ ಧರಿಸುವುದರಿಂದ ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನಲಾಗುತ್ತದೆ.

ದೃಷ್ಟಿ ದೋಷ ಮತ್ತು ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಸಾಮಾನ್ಯವಾಗಿ ಸಮಾಜದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ದೃಷ್ಟಿ ತಗುಲುತ್ತದೆ ಎಂಬ ಬಲವಾದ ನಂಬಿಕೆ ಇದೆ. ಕಪ್ಪು ಬಣ್ಣಕ್ಕೆ ನಕಾರಾತ್ಮಕ ಶಕ್ತಿ ಮತ್ತು ಕೆಟ್ಟ ದೃಷ್ಟಿಯನ್ನು ಹೀರಿಕೊಂಡು ಅದನ್ನು ಇಲ್ಲದಂತೆ ಮಾಡುವ ಅದ್ಭುತ ಸಾಮರ್ಥ್ಯ ಇರುತ್ತದೆ. ಕಾಲಿಗೆ ಕಪ್ಪು ದಾರವನ್ನು ಧರಿಸುವುದರಿಂದ ಯಾವುದೇ ರೀತಿಯ ಬುದ್ಧಿಪೂರ್ವಕ ಅಥವಾ ಅಪ್ರಜ್ಞಾಪೂರ್ವಕ ಕೆಟ್ಟ ದೃಷ್ಟಿ ಮತ್ತು ಪ್ರಭಾವಗಳು ವ್ಯಕ್ತಿಯ ಮೇಲೆ ಬೀಳುವುದಿಲ್ಲ. ಇದು ದೇಹದ ಸುತ್ತ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತದೆ.

ಶನಿ ಮತ್ತು ರಾಹು ದೋಷಗಳ ನಿವಾರಣೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ಬಣ್ಣವು ಶನಿ ದೇವರಿಗೆ ಅತ್ಯಂತ ಪ್ರಿಯವಾದದ್ದು. ಜಾತಕದಲ್ಲಿ ಶನಿ ದೋಷ, ಶನಿ ಮಹಾದಶೆ ಅಥವಾ ಏಳೂವರೆ ಶನಿಯ ಪ್ರಭಾವ ಇರುವವರು ಕಾಲಿಗೆ ಕಪ್ಪು ದಾರವನ್ನು ಧರಿಸುವುದು ಅತ್ಯಂತ ಶ್ರೇಯಸ್ಕರ. ಇದು ಶನಿ ದೇವರ ವಕ್ರದೃಷ್ಟಿಯ ಪ್ರಭಾವವನ್ನು ಕಡಿಮೆ ಮಾಡಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸುತ್ತದೆ. ಇದರೊಂದಿಗೆ ರಾಹು ಮತ್ತು ಕೇತು ಗ್ರಹಗಳ ನಕಾರಾತ್ಮಕ ಚಲನೆಯಿಂದ ಉಂಟಾಗುವ ಆಕಸ್ಮಿಕ ಅಪಘಾತಗಳು ಮತ್ತು ಆರ್ಥಿಕ ನಷ್ಟಗಳನ್ನು ಇದು ತಡೆಯುತ್ತದೆ ಎಂದು ನಂಬಲಾಗಿದೆ.

ಆರೋಗ್ಯ ವೃದ್ಧಿ ಮತ್ತು ರೋಗನಿರೋಧಕ ಶಕ್ತಿ ಕಾಲಿಗೆ ಕಪ್ಪು ದಾರ ಕಟ್ಟುವುದರ ಹಿಂದೆ ವೈಜ್ಞಾನಿಕ ಮತ್ತು ಆರೋಗ್ಯದ ಕಾರಣಗಳೂ ಇವೆ. ನಮ್ಮ ಕಾಲಿನ ಹೆಬ್ಬೆರಳು ಮತ್ತು ಹಿಮ್ಮಡಿಯ ಭಾಗದಲ್ಲಿ ದೇಹದ ಹಲವು ಪ್ರಮುಖ ನರನಾಳಗಳು ಹಾದುಹೋಗುತ್ತವೆ. ಕಾಲಿಗೆ ದಾರವನ್ನು ಕಟ್ಟುವುದು ಈ ನರಗಳ ಮೇಲೆ ಸೌಮ್ಯವಾದ ಒತ್ತಡವನ್ನು ಉಂಟುಮಾಡುತ್ತದೆ, ಇದು ರಕ್ತ ಪರಿಚಲನೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ. ವಿಶೇಷವಾಗಿ ಪದೇ ಪದೇ ಕಾಡುವ ಕಾಲು ನೋವು, ಕೀಲು ನೋವು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಯಂತ್ರಿಸಲು ಇದು ನೆರವಾಗುತ್ತದೆ. ತೀವ್ರವಾದ ಆಯಾಸವನ್ನು ಕಡಿಮೆ ಮಾಡಲು ಇದು ಸಹಕಾರಿ.

ಆರ್ಥಿಕ ಪ್ರಗತಿ ಮತ್ತು ಸಕಾರಾತ್ಮಕ ಬದಲಾವಣೆ ಕೆಲವೊಮ್ಮೆ ಎಷ್ಟೇ ಶ್ರಮ ಪಟ್ಟರೂ ಕೈಯಲ್ಲಿ ಹಣ ಉಳಿಯುವುದಿಲ್ಲ ಅಥವಾ ಸಾಲದ ಬಾಧೆ ಕಾಡುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಧಾರ್ಮಿಕ ನಿಯಮಗಳ ಪ್ರಕಾರ ವಿಧಿವಿಧಾನಗಳೊಂದಿಗೆ ಕಾಲಿಗೆ ಕಪ್ಪು ದಾರವನ್ನು ಧರಿಸುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಇದು ಮನೆಯಲ್ಲಿ ಧನ ಧಾನ್ಯಗಳ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ ಮತ್ತು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿ ಯಶಸ್ಸಿನತ್ತ ಮುನ್ನಡೆಯಲು ಪ್ರೇರೇಪಿಸುತ್ತದೆ.

ಕಪ್ಪು ದಾರವನ್ನು ಧರಿಸುವಾಗ ಶನಿವಾರದ ದಿನದಂದು ದೇವಸ್ಥಾನದಲ್ಲಿ ಪೂಜಿಸಿ, ಮಂತ್ರ ಪಠಣದೊಂದಿಗೆ ಕಟ್ಟುವುದು ಅತ್ಯಂತ ಫಲಪ್ರದ. ಹಾಗೆಯೇ ಕಪ್ಪು ದಾರ ಕಟ್ಟಿರುವ ಕಾಲಿಗೆ ಬೇರೆ ಯಾವುದೇ ಬಣ್ಣದ ದಾರವನ್ನು ಕಟ್ಟಬಾರದು ಎಂಬ ನಿಯಮವಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!