ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಯಾದ ವಿಶ್ವ ಹಿಂದೂ ಪರಿಷತ್‌ನ ಸ್ಥಾಪನಾ ದಿನದ ಅಂಗವಾಗಿ ಪ್ರತಿವರ್ಷ ಪುತ್ತೂರಿನಲ್ಲಿ ವಿಜೃಂಭಣೆಯಿಂದ ನಡೆಯುವ 16ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವದ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.ಸಮಿತಿಯ ಅಧ್ಯಕ್ಷರಾಗಿ ಡಾ. ಸುರೇಶ್ ಪುತ್ತೂರಾಯ, ಸಂಚಾಲಕರಾಗಿ ಕಿರಣ್ ಕುಮಾರ್ ರೈ ಕಬ್ಬಿನಹಿಟ್ಟು, ಸಹ ಸಂಚಾಲಕರಾಗಿ ಲಕ್ಷ್ಮಣ್ ಬೈಲಾಡಿ, ಕಾರ್ಯದರ್ಶಿಯಾಗಿ ಸೇಶಪ್ಪ ಬೆಳ್ಳಿಪ್ಪಾಡಿ ಹಾಗೂ ಕೋಶಾಧಿಕಾರಿಯಾಗಿ ಜಿತೇಶ್ ಬಲ್ನಾಡ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶ್ರೀಮತಿ ರೂಪಲೇಖಾ ಪರ್ಲಡ್ಕ, ಮೋಹನ್ ಕೆ., ಸುರೇಶ್ ರೈ ಹಾಗೂ ವಿಜಯ್ ಪಾಲಾರ್, ಸಹ ಕಾರ್ಯದರ್ಶಿಗಳಾಗಿ ಚೇತನ್ ಬೊಳುವಾರು ಮತ್ತು ಹರಿಣಿ ಪುತ್ತೂರಾಯ, ಸಹ ಕೋಶಾಧಿಕಾರಿಗಳಾಗಿ ಜೀವನ್ ಬಲ್ನಾಡ್ ಹಾಗೂ ಪ್ರದೀಪ್ ಆಜಲಡ್ಕ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ ಸೇರಿದಂತೆ ಪುತ್ತೂರು ನಗರ ಹಾಗೂ ಗ್ರಾಮಾಂತರ ಪ್ರಖಂಡದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.









