
ಬೆಂಗಳೂರಿನಲ್ಲಿ (Bengaluru) ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ (Head Constable Suicide) ಮಾಡಿಕೊಂಡು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್ ಪೇದೆಯನ್ನು ಮುಬಾರಕ್ ಸಿಕಿಂದರ್ ಮುಜಾವರ್ ಎಂದು ಗುರುತಿಸಲಾಗಿದೆ
ವರದಿ ಪ್ರಕಾರ ಕಳೆದ ಒಂದೂವರೆ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ!
ಮುಬಾರಕ್ ಸಿಕಿಂದರ್ ಮುಜಾವರ್ ಎಂಬ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರು ಬೆಂಗಳೂರಿನ ಆಡುಗೋಡಿಯಲ್ಲಿ ಶೀತಲಗೊಂಡಿರೋ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಬಾಡಿ ವಾಸನೆ ಬಂದ ಕಾರಣ ಘಟನೆ ಇಂದು ಬೆಳಕಿಗೆ ಬಂದಿದ್ದು, ಮೇಲ್ನೋಟಕ್ಕೆ ಕಳೆದ ಒಂದೂವರೆ ತಿಂಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬೆಳಗಾವಿ ಮೂಲದವರಾದ ಮುಬಾರಕ್ ಕಳೆದ ಏಳು ವರ್ಷಗಳಿಂದ ಸಿಎಆರ್ ದಕ್ಷಿಣದಲ್ಲಿ ಕೆಲಸ ಮಾಡಿಕೊಂಡಿದ್ದರು. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇನ್ನು ಪತ್ನಿ ಡೆಲಿವರಿಗಂತಾ ಬೆಳಗಾವಿಗೆ ಹೋಗಿದ್ದರು
ಇನ್ನು ಮೃತ ಪೇದೆ ಲಕ್ಷಗಟ್ಟಲೆ ಸಾಲ ಮಾಡಿಕೊಂಡಿದ್ದು, ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದಿದ್ದರು ಅನುಮಾನಿಸಲಾಗಿದೆ. ಅಲ್ಲದೇ ಮುಬಾರಕ್ ಸಂಬಳದ ಮೇಲೆ ಬ್ಯಾಂಕ್ ಆಫ್ ಬರೋಡದಲ್ಲಿ 20 ಲಕ್ಷ ಸಾಲ, ಉಳಿದಂತೆ ಬೇರೆಯವರಿಂದ ಸುಮಾರು 10 ಲಕ್ಷದವರೆಗೂ ಸಾಲ ಮಾಡಿದ್ದರು ಎಂದು ಹೇಳಲಾಗಿದೆ. ಜೊತೆಗೆ ಇತ್ತೀಚೆಗೆ ಕುಡಿತದ ಚಟಕ್ಕೂ ಬಿದ್ದಿದ್ದ ಮುಬಾರಕ್, ಇದೇ ಕಾರಣಕ್ಕೆ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ರವಾನಿಸಲಾಗುತ್ತದೆ






