ಪುತ್ತೂರು: ದರ್ಬೆ ಹಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಾ. 19ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಾಮಾನ್ಯ ಆರೋಗ್ಯ ತಪಾಸಣೆ, ಮೂಳೆ ಸಾಂದ್ರತೆಯ ಪರೀಕ್ಷೆ, ಕೀಲು ರೋಗ ಪರೀಕ್ಷೆಗಳು ನಡೆಯಲಿವೆ.

ಎಲುಬಿನ ಖಾಯಿಲೆಗಳು, ಕೀಲು ನೋವು, ಸೊಂಟದ ನೋವು, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಇರುವ ರೋಗಿಗಳು ಈ ಉಚಿತ ತಪಾಸಣಾ ಶಿಬಿರದ ಪ್ರಯೋಜನ ಪಡೆಯಬಹುದು. ಅವಶ್ಯಕತೆ ಇದ್ದಲ್ಲಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ, ಇಸಿಜಿ ಇತ್ಯಾದಿ ಪರೀಕ್ಷೆಗಳನ್ನು ಸಹ ಉಚಿತವಾಗಿ ಮಾಡಲಾಗುವುದು ಅಲ್ಲದೆ ಮುಂಚಿತವಾಗಿ ನೋಂದಾಯಿಸಲು 9448420130, 8971890758 ಈ ನಂಬರ್ ಗೆ ಕರೆ ಮಾಡಿ ಎಂದು ವೈದ್ಯ ಡಾ‌. ಅಜಿಕೆ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!