ಮುಂಬೈ: ಡಾ. ಪ್ರದೀಪ್ ಕುಮಾರ್ ಹಾಸ್ಪಿಟಲ್ ಆಫ್ ಆಯುರ್ವೇದ ವತಿಯಿಂದ ಜೂನ್ 27 ಮತ್ತು 28ರಂದು ಎರಡು ದಿನಗಳ ವಿಶೇಷ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ.
30ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಆಯುರ್ವೇದ ತಜ್ಞ ಡಾ. ಪ್ರದೀಪ್ ಕುಮಾರ್ (BAMS) ಅವರು ಶಿಬಿರದಲ್ಲಿ ರೋಗಿಗಳಿಗೆ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ನೀಡಲಿದ್ದಾರೆ. ಪಾರ್ಕಿನ್ಸನ್ಸ್, ಪ್ರೋಗ್ರೆಸಿವ್ ಸೂಪ್ರಾನ್ಯೂಕ್ಲಿಯರ್ ಪಾಲ್ಸಿ (PSP), ಮೋಟಾರ್ ನ್ಯೂರಾನ್ ಡಿಸೀಸ್ (MND), ಮಲ್ಟಿಪಲ್ ಸ್ಕ್ಲೆರೋಸಿಸ್ (MS) ಸೇರಿದಂತೆ ವಿವಿಧ ನರವೈಜ್ಞಾನಿಕ ಹಾಗೂ ಕ್ಷಯಕಾರಿ ನರರೋಗಗಳ ಚಿಕಿತ್ಸೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ.
ಶಿಬಿರವು ನವಜೀವನ್ ಗ್ಲೋಬಲ್ ಹಾರ್ಟ್ ಸೆಂಟರ್, ಪ್ಲಾಟ್ ನಂ. 258-273, ಸ್ವಾಮಿ ವಿವೇಕಾನಂದ ಶಾಲೆ ಬಸ್ ನಿಲ್ದಾಣದ ಹಿಂಭಾಗ, ಗೋರೈ-1, ಬೊರಿವಲಿ ಪಶ್ಚಿಮ, ಮುಂಬೈನಲ್ಲಿ ನಡೆಯಲಿದೆ.
ಜೂನ್ 27ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಹಾಗೂ ಜೂನ್ 28ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಶಿಬಿರ ನಡೆಯಲಿದೆ.
ಹೆಚ್ಚಿನ ಮಾಹಿತಿ ಹಾಗೂ ಪೂರ್ವನಿಗದಿತ ಭೇಟಿಗಾಗಿ +91 89713 05446 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.







