Author: Vidyamaana

ಸುಳ್ಯ: ವಿದ್ಯುತ್ ತಂತಿ ತಾಗಿ ಇಬ್ಬರು ಯುವಕರು ಸಾವು; ತೋಟದ ಮಾಲೀಕನ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು, ಅ.13: ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿ ತಾಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿ ಎಂಬಲ್ಲಿ ಅ.12ರಂದು ರಾತ್ರಿ ನಡೆದಿದೆ. ಘಟನೆಯಲ್ಲಿ ಜೊತೆಗಿದ್ದ ಅಪ್ರಾಪ್ತ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ…

ಭಾಸ್ಕರ್ ರಾವ್ ವಿರುದ್ಧ ಜುನೈದ್ ಪಿ.ಕೆ ಗೃಹ ಸಚಿವರಿಗೆ ದೂರು: ತನಿಖೆಗೆ ಆಗ್ರಹ..!!

ಭಾಸ್ಕರ್ ರಾವ್ ವಿರುದ್ಧ ತನಿಖೆಗೆ ಆಗ್ರಹ: ಗೃಹ ಸಚಿವರಿಗೆ ದೂರುಬೆಂಗಳೂರು: ಸುಳ್ಳು ಸುದ್ದಿ ಹರಡಿದ ಆರೋಪದಡಿ ಬಿಜೆಪಿ ನಾಯಕ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ವಿರುದ್ಧ ಪ್ರಕರಣ ದಾಖಲಿಸಿ, ಅವರ ಸೇವಾವಧಿಯಲ್ಲಿನ ಕಾರ್ಯವೈಖರಿ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ…

ಚೇತನಾ ಆಸ್ಪತ್ರೆಯಲ್ಲಿ ಇಂದು ರೋಟರಿ ಸದಸ್ಯರಿಗೆ ಉಚಿತ ಯೂರಿಕ್ ಆಸಿಡ್ ಪರೀಕ್ಷೆ

ಪುತ್ತೂರು: ದೇಹದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ತಿಳಿದುಕೊಳ್ಳುವ ಉದ್ದೇಶದಿಂದ ರೋಟರಿ ಸದಸ್ಯರಿಗೆ ಇಂದು ಉಚಿತ ಯೂರಿಕ್ ಆಸಿಡ್ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ.ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಕೀಲುಗಳಲ್ಲಿ ನೋವು, ಊತ ಹಾಗೂ ಗೌಟ್‌ (Gout) ಎಂಬ ಸಂಧಿವಾತದ ಸಮಸ್ಯೆ ಉಂಟಾಗಬಹುದು. ಕೆಲವರಲ್ಲಿ…

ಪುತ್ತೂರಿನ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ₹1.31 ಕೋಟಿ ವಂಚನೆ..!-ಮುಂಬೈ ಪೊಲೀಸ್, ಎಟಿಎಸ್ ಅಧಿಕಾರಿಗಳೆಂದು ನಂಬಿಸಿ ಹಣ ವರ್ಗಾವಣೆ ಮಾಡಿಸಿದ ಸೈಬರ್ ವಂಚಕರು

ಪುತ್ತೂರು: ಮುಂಬೈ ಪೊಲೀಸ್ ಹಾಗೂ ಎಟಿಎಸ್ (ATS) ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಗಳು, ಪೆಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಬಂಧನದ ಭೀತಿ ಹುಟ್ಟಿಸುವ ಮೂಲಕ ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬರೋಬ್ಬರಿ…

ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ 92ನೇ ವರ್ಷದ ನವರಾತ್ರಿ ಉತ್ಸವ,ಪುತ್ತೂರು ದಸರಾಕ್ಕೆ ಚಾಲನೆ-ಶಾರದಾ ಭಜನಾ ಮಂದಿರದ ಅಭಿವೃದ್ಧಿಗೆ ನಮ್ಮ ಸಮಿತಿಯ ಬೆಂಬಲವಿದೆ: ಪಂಜಿಗುಡ್ಡೆ ಈಶ್ವರ ಭಟ್-ಪುತ್ತೂರು ದಸರಾವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡುವ ಸಂಕಲ್ಪ: ಸೀತಾರಾಮ ರೈ ಕೆದಂಬಾಡಿಗುತ್ತು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಐತಿಹಾಸಿಕ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 92ನೇ ವರ್ಷದ ನವರಾತ್ರಿ ಉತ್ಸವ ಹಾಗೂ ಪುತ್ತೂರು ದಸರಾ ಕಾರ್ಯಕ್ರಮಗಳಿಗೆ ಅ.11ರಂದು ಚಾಲನೆ ನೀಡಲಾಯಿತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ…

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರಾವಳಿ ಪ್ರವಾಸ ರದ್ದು; ಮಂಗಳೂರು ದಸರಾ ಉದ್ಘಾಟನೆಗೂ ಗೈರು

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೋಮವಾರ ನಿಗದಿಯಾಗಿದ್ದ ಉಡುಪಿ ಮತ್ತು ಮಂಗಳೂರು ಪ್ರವಾಸವನ್ನು ಅನಿವಾರ್ಯ ಕಾರಣಗಳಿಂದ ರದ್ದುಗೊಳಿಸಲಾಗಿದೆ.ಈ ಕುರಿತು ಮುಖ್ಯಮಂತ್ರಿಗಳ ಕಾರ್ಯಾಲಯ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ನಿಗದಿಯಾಗಿದ್ದ ಮುಖ್ಯಮಂತ್ರಿಗಳ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

ಪುತ್ತೂರು:ಇಲ್ಲೊಂದು ಡಿವೈಡರ್ ಇದೆ… ಎಚ್ಚರಿಕೆ! ⚠️

ಪುತ್ತೂರು: ನಗರದ ಪುತ್ತೂರು–ಬೊಳುವಾರು ರಸ್ತೆಯ ಮಹಿಳಾ ಪೊಲೀಸ್ ಠಾಣೆ ಸಮೀಪ, ಹಳೆಯ ಗಣೇಶ್ ಪ್ರಸಾದ್ ಹೋಟೆಲ್‌ ಮುಂಭಾಗದಲ್ಲಿ ರಸ್ತೆಯ ಮಧ್ಯಭಾಗದಲ್ಲಿರುವ ಡಿವೈಡರ್‌ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಡಿವೈಡರ್‌ ತಗ್ಗಾಗಿದ್ದು, ಸಮರ್ಪಕವಾಗಿ ಗೋಚರಿಸದಿರುವುದರಿಂದ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಇದು…

ಪುತ್ತೂರು :ಬೆಂಕಿ ಅವಘಡ ಗಮನಿಸಿ ತಕ್ಷಣ ಸ್ಪಂದನೆ; ರವಿಕುಮಾರ್ ರೈ ಸಮಯಪ್ರಜ್ಞೆಗೆ ಮೆಚ್ಚುಗೆ..!!

ಪುತ್ತೂರು: ನಗರದ ಮುಖ್ಯ ರಸ್ತೆಯಲ್ಲಿರುವ ಸೋಜಾ ಅಲ್ಯೂಮಿನಿಯಂ ಅಂಗಡಿಯ ಮುಂಭಾಗದ ಹಳೆಯ ಕಟ್ಟಡವೊಂದರಲ್ಲಿ ಭಾನುವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಅಧ್ಯಕ್ಷ ರವಿಕುಮಾರ್ ರೈ…

ಫಾತಿಮತ್ ನಿಶಾನ ಕೊಲೆ ಪ್ರಕರಣ: ಅತ್ತೆ, ನಾದಿನಿ ಬಳಿಕ ಮಾವನಿಗೂ ಜಾಮೀನು.!!

ಕುಂಬ್ರ: ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಕಡೆಪಾಲದಲ್ಲಿ ನಡೆದಿದ್ದ ಕುಂಬ್ರ ಸಾರೆಪುಣಿಯ ಫಾತಿಮತ್ ನಿಶಾನ (22) ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಿ.ಪಿ. ಅಳವಿ ಅವರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಕುಂಬ್ರ ಸಮೀಪದ ಸಾರೆಪುಣಿಯ ಜುಬೈದಾ ಅವರ…

ಪುತ್ತೂರು -ಉಚಿತ ಕೋಳಿಮರಿ ವಿತರಣೆಗೆ ಅರ್ಜಿ ಆಹ್ವಾನ: ಅ.30 ಕೊನೆಯ ದಿನ..!!

ಪುತ್ತೂರು: ಪಶುಸಂಗೋಪನಾ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಉಚಿತವಾಗಿ ದೇಶಿ ಕೋಳಿಮರಿಗಳನ್ನು ವಿತರಿಸುವ ಯೋಜನೆಯಡಿ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಪುತ್ತೂರು ತಾಲೂಕಿನಲ್ಲಿ ಒಟ್ಟು 99 ಫಲಾನುಭವಿಗಳಿಗೆ ತಲಾ…

Join WhatsApp Group
error: Content is protected !!