ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯ ಕ್ರೈಂ ನಂ. 41/2019 (ಆರ್ಮ್ಸ್ ಆ್ಯಕ್ಟ್ ಹಾಗೂ ಐಪಿಸಿ ವಿವಿಧ ಕಲಂಗಳು) ಪ್ರಕರಣದ ಆರೋಪಿ ಉಮ್ಮರ್ ಫಾರುಖ್ (ತಂದೆ: ದಿ. ಮೊಹಮ್ಮದ್ ಶರೀಪ್), ಕೃಷ್ಣಾಪುರ, ಸೂರತ್ಕಲ್ ನಿವಾಸಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮಂಗಳೂರಿನ 6ನೇ ಜೆಎಂಎಫ್‌ಸಿ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿತ್ತು. ಆರೋಪಿಯು ವಿಳಾಸ ಬದಲಾಯಿಸಿದ್ದರೂ, ಪೊಲೀಸರು ಪತ್ತೆ ಹಚ್ಚಿ ಜುಲೈ 14, 2026ರಂದು ಬಂಧಿಸಿದರು.ಥಾಣೆಯ ಎಎಸ್‌ಐ ಜಗದೀಶ್, ಹೆಡ್ ಕಾನ್ಸ್‌ಟೇಬಲ್ ಬಾಲರಾಜ್ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ರವಿಕುಮಾರ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.ಪೊಲೀಸರ ಮಾಹಿತಿಯಂತೆ, ಉಮ್ಮರ್ ಫಾರುಖ್ ವಿರುದ್ಧ ಮಂಗಳೂರು, ಸೂರತ್ಕಲ್, ಕವೂರು, ಪಡುಬಿದ್ರೆ, ಮಂಗಳೂರು ಗ್ರಾಮಾಂತರ, ದಕ್ಷಿಣ ಠಾಣೆ, ಬರ್ಕೆ, ಯಲ್ಲಾಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ಶಸ್ತ್ರಾಸ್ತ್ರ ಕಾಯ್ದೆ, ಎನ್‌ಡಿಪಿಎಸ್, ಗಲಭೆ ಸೇರಿದಂತೆ 10ಕ್ಕೂ ಅಧಿಕ ಗಂಭೀರ ಪ್ರಕರಣಗಳು ದಾಖಲಾಗಿವೆ.

Leave a Reply

Your email address will not be published. Required fields are marked *

Join WhatsApp Group
error: Content is protected !!