ಕಬಕ:ಮುಹಮ್ಮದೀಯಾ ಹಜ್ ಆಯಂಡ್ ಉಮ್ರಾ ಟ್ರಾವೆಲ್ಸ್ ಏಜೆನ್ಸಿಯಿಂದ ವಂಚನೆ: ಆರೋಪ-ಪುತ್ತೂರಿನ ಯಾತ್ರಾರ್ಥಿಗಳು ಸಹಿತ 157ಕ್ಕೂ ಅಧಿಕ ಮಂದಿ ದಮ್ಮಾಮ್ ವಿಮಾನ ನಿಲ್ದಾಣದಲ್ಲಿ ಬಾಕಿ
ಉಮ್ರಾ ಯಾತ್ರೆಗೆಂದು ಮಕ್ಕಾ-ಮದೀನಾಕ್ಕೆ ಕರೆದೊಯ್ದ ಮುಹಮ್ಮದೀಯಾ ಹಜ್ ಆಯಂಡ್ ಉಮ್ರಾ ಟ್ರಾವೆಲ್ಸ್ನ ಮಾಲಕನು ಯಾತ್ರಾರ್ಥಿಗಳನ್ನು ಅರ್ಧದಲ್ಲೇ ಕೈ ಬಿಟ್ಟು ಪರಾರಿಯಾಗಿರುವ ಆರೋಪ ಕೇಳಿ ಬಂದಿದೆ. ಈ ವ್ಯಕ್ತಿಯಿಂದ ಮೋಸ ಹೋದ ಸುಮಾರು 157ಕ್ಕೂ ಅಧಿಕ ಮಂದಿ ಇದೀಗ ಮದೀನಾ-ದಮ್ಮಾಮ್ನಲ್ಲಿ ಸಿಲುಕಿಕೊಂಡಿರುವುದಾಗಿ ವರದಿಯಾಗಿದೆ.…
