ವ್ಯ ಕ್ತಿಯೋರ್ವನ ಕಿರುಕುಳದಿಂದ ಬೇಸತ್ತ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.ನಂದಿನಿ (32) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಮೃತ ಮಹಿಳೆ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಅನ್ಯ ಪುರುಷನೋರ್ವ ಕರೆ ಮಾಡಿ ದಿನನಿತ್ಯ ಹಿಂಸೆ ನೀಡುತ್ತಿದ್ದ ಇದೀಗ ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಂದಿನಿ ಕಳೆದ ಎಂಟು ವರ್ಷದ ಹಿಂದೆ ಸೂರ್ಯ ಎಂಬಾತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲದೇ ದಂಪತಿಗಳಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಕೂಡ ಇತ್ತು. ಆದರೆ ನಂದಿನಿಗೆ ದಿನನಿತ್ಯ ವ್ಯಕ್ತಿಯೋರ್ವ ಕರೆ ಮಾಡಿ ಹಿಂಸೆ ನೀಡುತ್ತಿದ್ದ..

ಈ ಸಂಬಂಧ ಪತ್ನಿ ಹಾಗೂ ಪತಿ ಸೂರ್ಯ ನಡುವೆ ಹಲವಾರು ಬಾರಿ ಗಲಾಟೆ ಕೂಡ ಆಗುತ್ತಿತ್ತು. ಒಂದೆಡೆ ಅನ್ಯ ವ್ಯಕ್ತಿಯಿಂದ ಕಿರುಕುಳ ಇನ್ನೊಂದೆಡೆ ಪತಿಯ ಜೊತೆ ಗಲಾಟೆ ಇವೆರಡರಿಂದ ಬೇಸತ್ತ ನಂದಿನಿ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ನೇಣಿಗೆ ಶರಣಾಗಿದ್ದಾರೆ.

ಫೆ.23 ರಂದು ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಬರುವ ಮುನ್ನವೇ ಕುಟುಂಬಸ್ಥರು ಮೃತದೇಹ ಕೆಳಗೆ ಇಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!