Month: November 2024

ಮಂಗಳೂರಿನಲ್ಲಿ ಹೊತ್ತಿ ಉರಿದ ಮಾರುತಿ ಕಾರು; ಮೂವರು ಪಾರು

ಮಂಗಳೂರು : ನಗರದ ಲೇಡಿಹಿಲ್‌ನ ನಾರಾಯಣಗುರು ವೃತ್ತದ ಬಳಿಯ ಪೆಟ್ರೋಲ್ ಬಂಕ್‌ ಸಮೀಪವೇ ಮಾರುತಿ 800 ಕಾರಿಗೆ ಬೆಂಕಿ ಹೊತ್ತಿಕೊಂಡು ಧಗ ಧಗನೇ ಉರಿದಿದೆ. ಕಾರಿನಲ್ಲಿದ್ದ ಮೂವರು ತಕ್ಷಣವೇ ಕೆಳಕ್ಕಿಳಿದು ಪಾರಾಗಿದ್ದಾರೆ. ಕಾರು ಬಜಪೆ ಆದ್ಯಪಾಡಿಯ ಪಾರ್ಶ್ವನಾಥ ಎಂಬುವರಿಗೆ ಸೇರಿದ್ದಾಗಿದೆ. ಅವರು…

ಪಕ್ಷಿಕೆರೆ| ತಾಯಿ-ಮಗುವಿನ ಕೊಲೆ, ಪತಿ ಆತ್ಮಹತ್ಯೆ ಪ್ರಕರಣ: ಒಂದೇ ಚಿತೆಯಲ್ಲಿ ಮೂವರ ಅಂತ್ಯಸಂಸ್ಕಾರ

ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಎಂಬಾತನು ತನ್ನ ಪತ್ನಿ ಪ್ರಿಯಾಂಕ (28) ಮಗು ಹೃದಯ್ (4) ಹತ್ಯೆಗೈದು ತಾನೂ ರೈಲಿನಡಿ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರ ಅಂತ್ಯ ಸಂಸ್ಕಾರ ಮುಲ್ಕಿ ಸಮೀಪದ ಕೆರೆಕಾಡು ಹಿಂದೂ ರುದ್ರ ಭೂಮಿಯಲ್ಲಿ…

ಪುಟ್ಟ ಮಗುವಿನ ಜೊತೆ ಆತ್ಮಹತ್ಯೆ ಮಾಡಿಕೊಳ್ಳಲು ಗುರುಪುರ ಸೇತುವೆಯ ಮೇಲೇರಿದ ಸಂದೀಪ್ ಪೂಜಾರಿ – ಚಾಣಾಕ್ಷತನದಲ್ಲಿ ಹಿಡಿದು ರಕ್ಷಿಸಿದ ಗುರುಪುರದ ಮುಸ್ಲಿಂ ಬಾಂಧವರು

ಮಂಗಳೂರು: ತನ್ನ ಪುಟ್ಟ ಮಗುವಿನೊಂದಿಗೆ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ತಂದೆ, ಮಗುವನ್ನು ಸ್ಥಳೀಯ ಮುಸ್ಲಿಮ್ ಯುವಕರು ರಕ್ಷಿಸಿದ ಘಟನೆ ನಗರದ ಹೊರ ವಲಯದ ಗುರುಪುರದಲ್ಲಿ ನಡೆದಿದೆ. ಕೈಕಂಬ ನಿವಾಸಿ ಸಂದೀಪ್ ಪೂಜಾರಿ ಅತ್ಮಹತ್ಯೆಗೆ ಯತ್ನಿಸಿದ ಯುವಕ…

ಮಧ್ಯರಾತ್ರಿ ಎದ್ದು ಬಾತ್‌ರೂಮ್‌ಗೆ ಹೋದ ಡ್ಯಾಂ ಸೆಕ್ಯುರಿಟಿ ಗಾರ್ಡ್‌ಗೆ ಶಾಕ್!

ಅ ನೇಕರು ಮಧ್ಯರಾತ್ರಿ ಎದ್ದು ಸುಸ್ಸು ಮಾಡಿ ಮಲಗುವ ಅಭ್ಯಾಸವಿದೆ. ಹೀಗೆ ಮಧ್ಯರಾತ್ರಿ ಮೂತ್ರ ವಿಸರ್ಜನೆ ಮಾಡುವುದಕ್ಕಾಗಿ ಬಾತ್‌ರೂಮ್‌ಗೆ ಹೋದ ವ್ಯಕ್ತಿಯೊಬ್ಬರು ಅಲ್ಲಿನ ದೃಶ್ಯ ನೋಡಿ ಶಾಕ್ ಆಗಿದ್ದು, ಇದರ ದೃಶ್ಯಾವಳಿಗಳು ಈಗ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್…

ದುಬೈ :ಬಪ್ಪಳಿಗೆ ಮಸೀದಿ ಅಧ್ಯಕ್ಷ ಹಮೀದ್ ಹಾಜಿ ಲೌಲಿಯವರಿಗೆ  ಬಪ್ಪಳಿಗೆ NRI ಕಮಿಟಿ ಹಾಗೂ ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್(BGF) ನಿಂದ ಸನ್ಮಾನ

ಪುತ್ತೂರು : ಖಾಸಗಿ ಕಾರ್ಯ ನಿಮಿತ್ತ ದುಬಾಯಿ ಪ್ರವಾಸದಲ್ಲಿರುವ ಬಪ್ಪಳಿಗೆಯ ಮಸೀದಿಯ ಅಧ್ಯಕ್ಷರಾದ ಲೌಲಿ ಹಮೀದ್ ಹಾಜಿಯವರನ್ನು ಅನಿವಾಸಿ ಬಪ್ಪಳಿಗೆಯ NRI ಸಮಿತಿ ಹಾಗೂ ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ನ ಪದಾಧಿಕಾರಿಗಳು ಭೇಟಿಯಾಗಿ ಸನ್ಮಾನಿಸಿದರು. ದುಬಾಯಿಯ ಅಲ್ ಹೈಲ್ ಮೆಟ್ರೋ ಸ್ಟೇಷನ್…

ಪುತ್ತೂರು: ಗರ್ಲ್ಸ್ ಹಾಸ್ಟೆಲ್ ನಲ್ಲಿ ರಾತ್ರಿ ಸುತ್ತಾಡಿದ ಯುವಕ

ಪುತ್ತೂರು: ಪುತ್ತೂರಿನ ಬಾಲಕಿಯರ ಹಾಸ್ಟೆಲ್ ನಲ್ಲಿ ಅಪರಿಚಿತ ಯುವಕನೊಬ್ಬ ಸುತ್ತಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳ ಆಧಾರದ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಯುವಕ ಕಳ್ಳತನಕ್ಕೆ ಯತ್ನಿಸಿರಬಹುದೆಂಬ ಅನುಮಾನ ಮೂಡಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಮಂಗಳೂರು : ಚಾರ್ಮಾಡಿ ಘಾಟಿಯ ದಶಕದ ಸಮಸ್ಯೆಗೆ ಮುಕ್ತಿ, ಘಾಟ್‌ ಹೆದ್ದಾರಿ ದ್ವಿಪಥಗೊಳಿಸಲು ಕೇಂದ್ರದಿಂದ 343.74 ಕೋಟಿ ರೂ. ಬಿಡುಗಡೆ

ಮಂಗಳೂರು : ಚಾರ್ಮಾಡಿ ಘಾಟಿಯ ದಶಕದ ಸಮಸ್ಯೆಗೆ ಮುಕ್ತಿ ಹಾಡುವ ಕಾಲ ಸನ್ನಿಹಿತವಾಗಿದ್ದು ಘಾಟ್‌ ಹೆದ್ದಾರಿ ದ್ವಿಪಥಗೊಳಿಸಲು ಕೆಂದ್ರ ಸರ್ಕಾರ 343.74 ಕೋಟಿ ರೂ.ಬಿಡುಗಡೆ ಮಾಡಿದೆ. ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ…

ರೈಲು ಬೋಗಿ ಜೋಡಣೆ ನಡುವೆ ಸಿಲುಕಿ ಕಾರ್ಮಿಕ ನಜ್ಜುಗುಜ್ಜು; ಸಾವು

ರೈಲು ಬೋಗಿ ಜೋಡಿಸುವಾಗ ಸಂಭವಿಸಿದ ಅಪಘಾತದಿಂದಾಗಿ ರೈಲ್ವೆ ಪೋರ್ಟರ್ ಒಬ್ಬರು ಮೃತಪಟ್ಟಿರುವ ಘಟನೆ ಬಿಹಾರದ ಗುಸರಾಯ್‌ನ ಬರೌನಿ ಜಂಕ್ಷನ್‌ನಲ್ಲಿ ಶನಿವಾರ ನಡೆದಿದೆ. ಮೃತನನ್ನು ಅಮರ್ ಕುಮಾರ್ ರಾವ್ ಎಂದು ಗುರುತಿಸಲಾಗಿದೆ. ಈತ ಸೊನಾಪುರ ರೈಲ್ವೆ ವಲಯ ವ್ಯಾಪ್ತಿಯ ನಿಲ್ದಾಣದಲ್ಲಿ ಪೋರ್ಟರ್ ಆಗಿ…

ಬಂಟ್ವಾಳ :ಪ್ರಿಯತಮೆಯ ಭೇಟಿಯಾಗಲು ನಡುರಾತ್ರಿಯಲ್ಲಿ ಬಂದ ಪ್ರಿಯಕರನ ಕಟ್ಟಿಹಾಕಿ ಹಲ್ಲೆ ನಡೆಸಿದ ಪ್ರಕರಣ – ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.!

ಪ್ರಿಯತಮೆಯನ್ನು ಭೇಟಿಯಾಗಲು ಬಂದ ಯುವಕನಿಗೆ ಸ್ಥಳೀಯರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನ.7ರ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ…

ಬೆಳ್ಳಾರೆ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ನೂತನ ಸಮಿತಿಯ ಪದಗ್ರಹಣ ಮತ್ತು ಕಚೇರಿ ಉದ್ಘಾಟನೆ

ಅಕ್ಷರ ಕಲಿಸಿದ ವಿದ್ಯಾಸಂಸ್ಥೆಯನ್ನು ಎಂದಿಗೂ ಮರೆಯಬಾರದು : ಶಾಸಕಿ ಭಾಗೀರಥಿ ಮುರುಳ್ಯ

ಕಾಲೇಜಿನ ಕೊರತೆಗಳನ್ನು ತುಂಬುವ ಸಾಮರ್ಥ್ಯ ಹಿರಿಯ ವಿದ್ಯಾರ್ಥಿ ಸಂಘಕ್ಕಿದೆ : ಸೀತಾರಾಮ ಕೇವಳ

ಪೆರುವಾಜೆ : ಪ್ರತಿಯೊಬ್ಬ ಸಾಧಕನ ಹಿಂದೆ ವಿದ್ಯೆಯ ಪಾತ್ರ ಮುಖ್ಯವಾದದು. ಹೀಗಾಗಿ ಅಕ್ಷರ ಕಲಿಸಿದ ವಿದ್ಯಾಸಂಸ್ಥೆಯನ್ನು ಎಂದಿಗೂ ಮರೆಯದೇ ಅದರೊಂದಿಗೆ ಸದಾ ಕಾಲ ಸಂಬಂಧ ಇರಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘವೂ ಸಂಸ್ಥೆಯ ಜತೆಗೆ ಸುದೀರ್ಘ ಒಡನಾಟ ಇರಿಸಿಕೊಳ್ಳಲು, ಅದರ…

Join WhatsApp Group
error: Content is protected !!