ಅ ನೇಕರು ಮಧ್ಯರಾತ್ರಿ ಎದ್ದು ಸುಸ್ಸು ಮಾಡಿ ಮಲಗುವ ಅಭ್ಯಾಸವಿದೆ. ಹೀಗೆ ಮಧ್ಯರಾತ್ರಿ ಮೂತ್ರ ವಿಸರ್ಜನೆ ಮಾಡುವುದಕ್ಕಾಗಿ ಬಾತ್‌ರೂಮ್‌ಗೆ ಹೋದ ವ್ಯಕ್ತಿಯೊಬ್ಬರು ಅಲ್ಲಿನ ದೃಶ್ಯ ನೋಡಿ ಶಾಕ್ ಆಗಿದ್ದು, ಇದರ ದೃಶ್ಯಾವಳಿಗಳು ಈಗ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ಬಾತ್‌ರೂಮ್‌ನಲ್ಲಿದಿದ್ದು, ಅತೀ ಅಪರೂಪದ ಅತಿಥಿ ಆಗಿರುವ ಚಿಪ್ಪಂದಿ.

ಪುಣೆಯ ಡ್ಯಾಂವೊಂದರಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಈ ಅನುಭವ ಆಗಿದೆ. ರಾತ್ರಿ ಬಾತ್‌ರೂಮ್‌ಗೆ ಹೋದ ಸೆಕ್ಯೂರಿಟಿ ಗಾರ್ಡ್ ಅಲ್ಲಿದ್ದ ಚಿಪ್ಪಂದಿಯನ್ನು ನೋಡಿ ಶಾಕ್ ಆಗಿದ್ದಾರೆ. ಖಡಕ್‌ವಸ್ಲ ಡ್ಯಾಮ್‌ನ ಭದ್ರತಾ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಕೂಡಲೇ ಗಾಬರಿಯಾದ ಸೆಕ್ಯೂರಿಟಿ ಗಾರ್ಡ್ ಅವರು ತಾನು ಜೀವನದಲ್ಲಿ ಎಂದು ನೋಡಿರದ ಪ್ರಾಣಿಯೊಂದು ಇಲ್ಲಿನ ಬಾತ್‌ರೂಮ್‌ನಲ್ಲಿ ಸೇರಿಕೊಂಡಿದೆ ಎಂದು ಪ್ರಾಣಿ ಸಂರಕ್ಷಣಾ ಚಾರಿಟೇಬಲ್‌ ಟ್ರಸ್ಟ್‌ಗೆ ಮಾಹಿತಿ ನೀಡಿದ್ದಾರೆ.

ಭಯದ ನಡುವೆಯೂ ಆತ ಬುದ್ಧಿ ಉಪಯೋಗಿಸಿ ಬಾತ್‌ರೂಮ್‌ನಲ್ಲಿದ್ದ ಚಿಪ್ಪಂದಿಯನ್ನು ಅಲ್ಲೇ ಬಿಟ್ಟು ಹೊರಗಿನಿಂದ ಬಾಗಿಲು ಹಾಕಿದ್ದಾರೆ. ಬಳಿಕ ವನ್ಯಜೀವಿ ರಕ್ಷಣಾ ತಂಡಕ್ಕೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಸಿನ್ಹಗಢ ರಸ್ತೆಯಲ್ಲಿರುವ ಈ ಸ್ಥಳಕ್ಕೆ ಸ್ವಲ್ಪ ಹೊತ್ತಿನಲ್ಲೇ ರಕ್ಷಣಾ ಸಿಬ್ಬಂದಿ ಆಗಮಿಸಿ ಚಿಪ್ಪುಹಂದಿಯನ್ನು ರಕ್ಷಿಸಿದ್ದಾರೆ.

ನಂತರ ಬಾತ್‌ರೂಮ್‌ನಲ್ಲಿ ಸೆರೆಯಾದ ಈ ಚಿಪ್ಪಂದಿಯನ್ನು ಸುರಕ್ಷಿತವಾಗಿ ಸೆರೆಹಿಡಿದು, ಸಬವ್‌ಧಾನ್‌ನಲ್ಲಿರುವ ಲಾಭೋದ್ದೇಶವಿಲ್ಲದ ವನ್ಯಜೀವಿ ಚಿಕಿತ್ಸೆ ಮತ್ತು ಸಾರಿಗೆ ಸೌಲಭ್ಯ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಅಲ್ಲಿನ ಪಶುವೈದ್ಯರು ಪ್ರಾಣಿಯನ್ನು ಪರೀಕ್ಷಿಸಿದರು ಮತ್ತು ಅದು ಆರೋಗ್ಯಕರ ಮತ್ತು ಕಾಡಿಗೆ ಬಿಡಲು ಯೋಗ್ಯವಾಗಿದೆ ಎಂದು ನಿರ್ಧರಿಸಿದರು. ನಂತರ ರಾತ್ರಿಯ ವೈದ್ಯಕೀಯ ಅವಲೋಕನದ ನಂತರ, ಈ ಚಿಪ್ಪಂದಿಯನ್ನು ಮಾನವ ಚಟುವಟಿಕೆಯಿಂದ ದೂರವಿರುವ ಅರಣ್ಯ ಪ್ರದೇಶಕ್ಕೆ ಸಾಗಿಸಲಾಯಿತು.

ಚಿಪ್ಪಂದಿಗಳು ಏಷ್ಯಾ ಮತ್ತು ಆಫ್ರಿಕಾದಲ್ಲಿ ಆವಾಸ ಸ್ಥಾನವನ್ನು ಹೊಂದಿರುವ ವಿಶಿಷ್ಟವಾದ ಚಿಪ್ಪುಳ್ಳ ಸಸ್ತನಿಗಳ ಎಂಟು ಜಾತಿಗಳಲ್ಲಿ ಒಂದಾಗಿದೆ. ಭಾರತದಲ್ಲಿ ಹಿಮಾಲಯದ ತಪ್ಪಲಿನಿಂದ ಆಳವಾದ ದಕ್ಷಿಣದವರೆಗೆ ವ್ಯಾಪಕವಾದ ಆವಾಸ ಸ್ಥಾನವನ್ನು ಹೊಂದಿದೆ. ಕೀಟಗಳನ್ನು ತಿನ್ನುವ ಇವುಗಳು ರೈತ ಸ್ನೇಹಿಗಳಾಗಿವೆ. ಆದರೆ ತಮ್ಮ ನಾಚಿಕೆ ಸ್ವಭಾವದಿಂದಾಗಿ ಈ ಪ್ರಾಣಿಗಳು ಮನುಷ್ಯರಿಗೆ ಭಯಪಡುತ್ತವೆ ಮತ್ತು ಕಣ್ಣಿಗೆ ಕಾಣದಂತೆ ಮರೆಯಾಗುತ್ತವೆ. ಆದರೂ ಪುಣೆಯಲ್ಲಿ ಈ ಚಿಪ್ಪಂದಿ ಕಾಣಲು ಸಿಕ್ಕಿದ್ದು ಇದೆ ಮೊದಲು ಈ ಹಿಂದೆ ಇವುಗಳು ಕಾಣ ಸಿಕ್ಕಿದ್ದು ಅತೀ ಅಪರೂಪ ಎಂದು ರಕ್ಷಣಾ ತಂಡದ ಅಧಿಕಾರಿ ತುಹಿನ್ ಸತ್ಕಾರ್ಕರ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!