src="https://vidyamaana.com/wp-content/uploads/2024/09/gl-today-1.jpeg" alt="" width="1810" height="2560" />


ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಭೀರ ಪ್ರಕರಣ ನಡೆದರೂ ವಿಶೇಷ ಪೊಲೀಸ್ ತಂಡದ ಜೊತೆಗೆ ಇದ್ದು ಹಿರಿಯ ಅಧಿಕಾರಿಗಳು ಹೇಳಿದಂತೆ ಕರ್ತವ್ಯ ನಿರ್ವಹಿಸಿ ಭೇದಿಸುವ ಪೊಲೀಸ್ ಹೆಡ್ ಕಾನ್ಟೇಬಲ್ ಮೂರುಗೋಳಿಯ ಪ್ರವೀಣ್.ಎಂ ಇವರಿಗೆ ಈ ಭಾರಿ ಮುಖ್ಯಮಂತ್ರಿ ಪದಕಕ್ಕೆ ಅಯ್ಕೆ ಅಗಿದ್ದಾರೆ. ಎಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕವನ್ನು ನೀಡಲಿದ್ದಾರೆ.


ಬೆಳ್ತಂಗಡಿ ತಾಲೂಕಿನ ಪುತ್ತಿಲ್ಲ ಗ್ರಾಮದ ಮೂರುಗೋಳಿ ನಿವಾಸಿ ಅಣ್ಣು ದೇವಾಡಿಗ ಮತ್ತು ಬೇಬಿ ದೇವಾಡಿಗರ ಮೊದಲ ಮಗ ಪ್ರವೀಣ್.ಎಂ ಇವರು 2002 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಮೊದಲು ಕರ್ತವ್ಯವನ್ನು ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಮಾಡಿದ್ದು ಬಳಿಕ ಬೆಳ್ತಂಗಡಿ ವೃತ್ತ ಕಚೇರಿ, ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳ(DCIB) , ಬಂಟ್ವಾಳ ಡಿವೈಎಸ್ಪಿ ವಿಶೇಷ ಅಪರಾಧ ದಳ , ವೇಣೂರು ಪೊಲೀಸ್ ಠಾಣೆ, ಸದ್ಯ ಈಗ ದಕ್ಷಿಣ ಕನ್ನಡ ಸೈಬರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಎರಡು ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ(NIA) ಜೊತೆಗೆ ಕರ್ತವ್ಯ ನಿರ್ವಹಿಸಿದ್ದಾರೆ.

*NIA ಅಧಿಕಾರಿಗಳ ಜೊತೆ ಕರ್ತವ್ಯ:*  ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂದರ್ಭದಲ್ಲಿ NIA ತನಿಖಾ ದಳದೊಂದಿಗೆ 6 ತಿಂಗಳು ಕರ್ತವ್ಯ ನಿರ್ವಹಿಸುತ್ತಿದ್ದು. ಬಳಿಕ ಬಿಹಾರದಲ್ಲಿ ಮೋದಿ ಹತ್ಯೆ ಯತ್ನ ಪ್ರಕರಣದಲ್ಲಿ NIA ಜೊತೆ 3 ತಿಂಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

*ಹಲವು ಗಂಭೀರ ಪ್ರಕರಣ:* ಶರತ್ ಮಾಡಿವಾಳ ಹತ್ಯೆ ಪ್ರಕರಣ, ಫರಂಗಿಪೇಟೆ ಡಬ್ಬಲ್ ಮಾರ್ಡರ್, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, 9 ದೇವಾಲಯ ಕಳವು ಪ್ರಕರಣ, ಬೆಳ್ತಂಗಡಿ ಬಂಗಾಡಿ ಬಸದಿ ಸೇರಿ 9 ದೇವಾಲಯ ಕಳ್ಳತನ ಪ್ರಕರಣ,ವಿಟ್ಲ ಕರ್ನಾಟಕ ಬ್ಯಾಂಕ್ ದರೋಡೆ, ಪುತ್ತೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದ ದರೋಡೆ, ವಗ್ಗ ಮನೆ ದರೋಡೆ ಪ್ರಕರಣ, ವಿಟ್ಲ ಸಿಂಗಾರಿ ಬೀಡಿ ನಕಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ, ಫರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣ ಹಾಗೂ ಇನ್ನಿತರ ಗಂಭೀರ ಪ್ರಕರಣದಲ್ಲಿ ವಿಶೇಷ ತಂಡದ ಜೊತೆ ಪ್ರಮುಖ ಪಾತ್ರವನ್ನು ವಹಿಸಿ ಪ್ರಕರಣ ಭೇದಿಸಿ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

*ನಗದು ಪುರಸ್ಕಾರ& ಪ್ರಶಸ್ತಿ:* ಪ್ರವೀಣ್ ಅಪರಾಧ ಪತ್ತೆ ಪ್ರಕರಣದ ಕರ್ತವ್ಯಕ್ಕೆ ಸುಮಾರು 57 ನಗದು ಪುರಸ್ಕಾರ ಬಹುಮಾನ ಹಾಗೂ ಇತರ ಹಲವು ಪ್ರಶಸ್ತಿ ಲಭಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!