ಅಮೆರಿಕಾದ ಅಕ್ರಮ ವಲಸಿಗರು ಯುನೈಟೆಡ್ ಸ್ಟೇಟ್ಸ್ ತೊರೆಯದೇ ಇದ್ದಲ್ಲಿ ದಿನಕ್ಕೆ $ 998 ಡಾಲರ್ ದಂಡ ವಿಧಿಸಲು ಟ್ರಂಪ್ ಮುಂದಾಗಿದ್ದು, ಒಂದುವೇಳೆ ದಂಡ ಪಾವತಿಸದಿದ್ದರೆ ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಡೊನಾಲ್ಡ್ ಟ್ರಂಪ್ ಆಡಳಿತ ಮುಂದಾಗಿದೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧಿಕಾರಾವಧಿ 2018 ರಲ್ಲಿ ಮೊದಲ ಬಾರಿಗೆ ಜಾರಿಗೊಳಿಸಲಾದ 1996 ರ ಕಾನೂನಿನ ಪ್ರಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.ಹೀಗಾಗಿ ಈ ಹಿಂದಿನ ಐದು ವರ್ಷಗಳ ಪೂರ್ವಭಾವಿಯಾಗಿ ಈ ಪೆನಾಲ್ಟಿಗಳನ್ನು ಅನ್ವಯಿಸಲು ಟ್ರಂಪ್ ಯೋಜಿಸಿದ್ದಾರೆ. ಆ ಲೆಕ್ಕಾಚಾರದ ಪ್ರಾಕರ, ಇದು $ 1 ಮಿಲಿಯನ್‌ಗಿಂತಲೂ ಹೆಚ್ಚಿನ ದಂಡಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ರಾಯಿಟರ್ಸ್‌ನ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ, ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ವಕ್ತಾರ ಟ್ರಿಸಿಯಾ ಮ್ಯಾಕ್‌ಲಾಫ್ಲಿನ್ ಹೇಳಿಕೆಯಲ್ಲಿ, ಯುಎಸ್‌ನಲ್ಲಿ ಅಕ್ರಮವಾಗಿ ವಲಸಿಗರು ಈ ಹಿಂದೆ CBP One ಎಂದು ಕರೆಯಲ್ಪಡುವ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬೇಕು – ಟ್ರಂಪ್ ಅಡಿಯಲ್ಲಿ CBP ಹೋಮ್ ಎಂದು ಮರುನಾಮಕರಣ ಮಾಡಲಾಯಿತು – “ಸ್ವಯಂ ಗಡೀಪಾರು ಮಾಡಲು ಮತ್ತು ಈಗ ದೇಶವನ್ನು ತೊರೆಯಲು”.

ಹೀಗೆ ಪೆನಾಲ್ಟಿಗಳು ಹಾಗೂ ಅದನ್ನು ಪಾವತಿಸದ ವಲಸಿಗರ ಆಸ್ತಿ ವಶಪಡಿಸಿಕೊಳ್ಳುವಿಕೆ ಮತ್ತು ಅವರ ಆಸ್ತಿಗಳ ಮಾರಾಟದ ಪ್ರಕ್ರಿಯೆಗಳನ್ನು ನಿಭಾಯಿಸಲು ಶ್ವೇತಭವನದ ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ವಿಭಾಗಕ್ಕೆ ಸೂಚನೆ ನೀಡಲಾಗಿದ್ದು, ಈ ನಡೆಯಿಂದ ವಲಸಿಗರಿಗೆ ದಿಕ್ಕು ತೋಚದಂತಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!