



ಸರ್ಕಾರಿ ಬಸ್ಸೊಂದು ರಸ್ತೆ ಪಕ್ಕದ ಮನೆಯ ಮೇಲೆ ಪಲ್ಟಿಯಾದ ಘಟನೆ ಕೊಪ್ಪ ತಾಲೂಕಿನ ಜಲದುರ್ಗ ಬಳಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಇಂದು ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸುಮಾರು 20 ಮಂದಿಗೆ ಗಾಯಗಳಾಗಿದ್ದು, ಅವರನ್ನು ಜಯಪುರ ಮತ್ತು ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
50 ಮಂದಿ ಪ್ರಯಾಣಿಕರನ್ನು ಹೊತ್ತ ಸರ್ಕಾರಿ ಬಸ್ ಬೆಂಗಳೂರಿನಿಂದ ಶೃಂಗೇರಿಗೆ ಬರುತ್ತಿತ್ತು. ಕೊಪ್ಪ ತಾಲೂಕಿನ ಜಲದುರ್ಗ ತಲುಪುತ್ತಿದ್ದಂತೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮನೆಯ ಮೇಲೆ ಪಲ್ಟಿಯಾಗಿದೆ.
ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
