ತೆಹ್ರಿ ಗಡ್ವಾಲ್ ಜಿಲ್ಲೆಯ ದೇವಪ್ರಯಾಗ ಮತ್ತು ಕೀರ್ತಿನಗರ ನಡುವಿನ ರಿಷಿಕೇಶ್-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ (NH 58) ಯಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಲಕನಂದಾ ನದಿಗೆ ಉರುಳಿಬಿದ್ದ ಘಟನೆ ನಡೆದಿದೆ.

ಈ ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದರು ಎಲ್ಲರೂ ಶ್ರೀಕೋಟ್‌ನ ನಿವಾಸಿಗಳು ಎನ್ನಲಾಗಿದೆ.ಈ ಪೈಕಿ ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಉಳಿದ ನಾಲ್ವರು ಪ್ರಯಾಣಿಕರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಹೀಗೆ ಕಾರು ನೀರಿಗೆ ಬಿದ್ದ ನಂತರ ಮಹಿಳೆ ಕಾರಿನಿಂದ ಹೊರಬಂದು ಭಾಗಶಃ ಮುಳುಗಿದ ಕಾರಿನ ಮೇಲೆ ಕುಳಿತು ಜೀವ ಉಳಿಸಿಕೊಂಡಿದ್ದಾರೆ ಮತ್ತು ತಕ್ಷಣವೇ ಸಹಾಯಕ್ಕಾಗಿ ಬೇಡಿಕೊಂಡಿದ್ದಾರೆ.ಹೀಗಾಗಿ ಕೂಡಲೇ ಅವರನ್ನು ರಕ್ಷಿಸಲಾಗಿದೆ.

ಇನ್ನು ಉಳಿದ ನಾಲ್ವರು ಪ್ರಯಾಣಿಕರು ಕಾಣೆಯಾಗಿದ್ದು ನದಿಯಲ್ಲಿ ಹುಡುಕಾಟ ಮುಂದುವರೆದಿದೆ.ಸದ್ಯ

ಅಪಘಾತದ ಸ್ಥಳದಲ್ಲಿ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರೇಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!