ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ (ಜಾತಿ ಗಣತಿ) ದತ್ತಾಂಶಗಳ ಅಧ್ಯಯನ ವರದಿಯನ್ನು ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಮಂಡನೆಯಾಗಿದೆ.

ಜಾತಿ ಗಣತಿ ವರದಿಯಲ್ಲಿ ಯಾವ್ಯಾವ ಜಾತಿಯ ಜನರು ರಾಜ್ಯದಲ್ಲಿ ಎಷ್ಟಿದ್ದಾರೆ ಎಂಬುವುದರ ಬಗ್ಗೆ ಕೆಲ ನಿಖರ ಅಂಕಿಶಗಳು ಎನ್ನಲಾದ ಮಾಹಿತಿ ರಿವೀಲ್ ಆಗಿದೆ.

ರಾಜ್ಯದಲ್ಲಿ ನಗರ ಪ್ರದೇಶದಲ್ಲಿ ಒಟ್ಟು 2,04,02,006, ಗ್ರಾಮೀಣದಲ್ಲಿ 3,94,12,936 ಸೇರಿದಂತೆ ಒಟ್ಟು 5,98,14,942 ಜಾತಿಗಣತಿ ಸಂಖ್ಯೆ ಇದೆ ಎಂದು ತಿಳಿದುಬಂದಿದೆ.

ಆ ಪೈಕಿ ವೀರಶೈವ ಲಿಂಗಾಯತ ಜನಸಂಖ್ಯೆ ಒಟ್ಟು 66,35,233, ಒಕ್ಕಲಿಗ ಸಮುದಾಯ 61,68,652, ಕುರುಬ ಸಮುದಾಯ 43,72,847, SC 1,09,29,347, ST 42,81,289, ಮುಸ್ಲಿಂ 76,99,425, ಬ್ರಾಹ್ಮಣ 15,64,741 ಸಂಖ್ಯೆ ಇದೆ ಎಂದು ವರದಿಯಾಗಿದೆ.

ಇನ್ನು ಸಲ್ಲಿಕೆಯಾದ ವರದಿ ಪ್ರಕಾರ…

29.02.2024 ರಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು 54 ಮಾನದಂಡಗಳಿಗೆ ಅನುಗುಣವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ 2024 ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಅಂಕಿ-ಅಂಶಗಳನ್ನು ಒಳಗೊಂಡ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು.

ರಾಜ್ಯದ 6.35 ಕೋಟಿ ಜನಸಂಖ್ಯೆಯಲ್ಲಿ 5.98 ಕೋಟಿ ಜನಸಂಖ್ಯೆ ಜನಗಣತಿಯಲ್ಲಿ ಒಳಗೊಂಡಿದೆ. 1.35 ಕೋಟಿ ಕುಟುಂಬಗಳು ಶೇ 94.17 ರಷ್ಟು ಮಾಹಿತಿ ಸಂಗ್ರಹಣೆಯಲ್ಲಿ ಪಾಲ್ಗೊಂಡಿವೆ. 37 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ. ಹೆಚ್. ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015ನೇ ಸಾಲಿನಲ್ಲಿ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಏ.11, 2015 ರಿಂದ ಪ್ರಾರಂಭಿಸಿ, ಮೇ 30, 2015 ರಂದು ಪೂರ್ಣಗೊಳಿಸಲಾಗಿರುತ್ತದೆ.





Leave a Reply

Your email address will not be published. Required fields are marked *

Join WhatsApp Group
error: Content is protected !!