
ಸಿಲಿಕಾನ್ ಸಿಟಿಯಲ್ಲಿನ ಟ್ರಾಫಿಕ್ ಬಿಸಿ ಜನಸಾಮಾನ್ಯರಿಗೆ ಮಾತ್ರವಲ್ಲದೇ ಇಂದು ಸಚಿವರಿಗೂ ತಟ್ಟಿದೆ. ತಾನು ಸಂಚರಿಸುತ್ತಿರುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇರುವುದನ್ನು ಮನಗಂಡ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಟೋ ಏರಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಹಿಂದುಳಿದ ವರ್ಗಗಳ ಶಾಸಕರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಸಂತೋಷ್ ಲಾಡ್ ತಮ್ಮ ಕಾರಿನಲ್ಲಿ ತೆರಳಿದ್ದಾರೆ.
ಆದರೆ ಮಾರ್ಗ ಮಧ್ಯ ಟ್ರಾಫಿಕ್ನಲ್ಲಿ ಸಿಲುಕಿದ್ದರು. ಪ್ಯಾಲೇಸ್ ರಸ್ತೆ, ಚಾಲುಕ್ಯ ಸರ್ಕಲ್ ಸುತ್ತಮುತ್ತ ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸರ್ಕಾರಿ ಕಾರು ಬಿಟ್ಟು, ಆಟೋ ಹತ್ತಿದ್ದಾರೆ.
ಸಭೆಯಲ್ಲಿ ಭಾಗಿಯಾಗುವುದು ತಡವಾಗುತ್ತೆ ಎಂಬುದನ್ನು ಮನಗಂಡ ಸಚಿವರು ಕಾರು ಬಿಟ್ಟು ಆಟೋ ಹತ್ತಿ ಸಭೆಯಲ್ಲಿ ಹಾಜರಾದರು.









