
ನನ್ನ ಮಗ ಹಿಂದುತ್ವವನ್ನೇ ಉಸಿರಾಗಿಸಿಕೊಂಡಿದ್ದ. ಹಿಂದೂಗಳನ್ನು ಒಗ್ಗೂಡಿಸಿದ್ದ. ಆದರೆ ಸದಾ ಹಿಂದುತ್ವ ಹಿಂದುತ್ವ ಹಿಂದುತ್ವವೇ ನನ್ನ ಉಸಿರು ಅನ್ನುತ್ತಿದ್ದವನ ಉಸಿರನ್ನೇ ಕಸಿದರು ಎಂದು ಹ*ತ್ಯೆಯಾಗ ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಹೇಳಿದ್ದಾರೆ.
ನಿನ್ನೆ ನಾವೆಲ್ಲರೂ ಒಂದು ಮದುವೆ ಕಾರ್ಯಕ್ರಮದಲ್ಲಿ ಇದ್ದೆವು. ಇಲ್ಲದಿದ್ದರೆ ಪ್ರತಿದಿನದಂತೆ ನಿನ್ನೆಯೂ ಆತನಿಗೆ ಕರೆ ಮಾಡಬೇಕಿತ್ತು. ನಿನ್ನೆ ಮದುವೆ ಕೆಲಸದಲ್ಲಿ ಅವನಿಗೆ ಕರೆ ಮಾಡಲಾಗಲಿಲ್ಲ ಎಂದು ಸುಹಾಸ್ ತಾಯಿ ಹೇಳಿದ್ದಾರೆ.
ಆರೋಪಿಗಳು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗಿಬೇಕು. ಇನ್ನೊಮ್ಮೆ ಇಂಥಾ ಘಟನೆಗಳು ನಡೆಯಬಾರದು ಎಂದು ಸುಹಾಸ್ ಶೆಟ್ಟಿ ತಾಯಿ ಹೇಳಿದ್ದಾರೆ.






