ಆಪರೇಷನ್ ಸಿಂಧೂರ್’ ಬಳಿಕ ಕೇಂದ್ರ ಸರ್ಕಾರ ಹಲವು ರೀತಿಯ ಭದ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದು, ಇದೀಗ ಭಾರತದೊಳಗಿನ ಸೋಷಿಯಲ್ ಮೀಡಿಯಾಗಳ ಮೇಲೆ ಹದ್ದಿನಕಣ್ಣು ಇಡಲಾಗಿದೆ

ಆರ್ಟಿಕಲ್ 69/A ಮಾಹಿತಿ ತಂತ್ರಜ್ಞಾನ ಆಕ್ಟ್ ನಿಯಮ ಅನುಸಾರ ಭಾರತದೊಳಗೆ ಸುಳ್ಳು ಸುದ್ದಿ ಹರಡುವ ಡಿಜಿಟಲ್ ಮಾಧ್ಯಮಗಳನ್ನು ನಿರ್ಬಂಧಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ ರವಾನಿಸಿದೆ.

ಪೆಹಾಲ್ಗಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಬಗ್ಗೆ ದೇಶದ ಅಂತರಿಕ ವಲಯದಲ್ಲಿ ವಿಷಬೀಜ ಬಿತ್ತುವ ಕೆಲಸ ಆಗುತ್ತಿದ್ದು, ಸಾಮಾಜಿಕ ಶಾಂತಿ ಹದಗೆಡುವ ಕೆಲಸಗಲಾಗುತ್ತಿದೆ. ಈ ಬಗ್ಗೆ ವಿಶೇಷ ನಿಗಾ ಇಡುವಂತೆ ರಾಜ್ಯಗಳಿಗೆ ಖಡಕ್ ಸೂಚನೆ ಕೊಟ್ಟಿದೆ.

ಪಾಕಿಸ್ತಾದಿಂದ ಆಪರೇಟ್ ಆಗುವ ಸೋಷಿಯಲ್ ಮೀಡಿಯಾ ಅಕೌಂಟ್ ಗಳ ಮೇಲೆ ನಿಗಾ ಇಡಿ. ಹಾಗೆಯೇ ಭಾರತದಲ್ಲಿ ಆಕ್ಟಿವ್ ಆಗಿರುವ ಅಕೌಂಟ್ ಬಗ್ಗೆ ಹುಷಾರಾಗಿರಿ ಎಂದು ಕೇಂದ್ರ ಸಂದೇಶ ರವಾನಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!