
ಕಾಶ್ಮೀರದ ಪಹಲ್ಲಾಮ್‌ನಲ್ಲಿ ಉಗ್ರರ ಭೀಕರ ಗುಂಡಿನ ದಾಳಿಗೆ 26 ಪ್ರವಾಸಿಗರು ಪ್ರಾಣಬಿಟ್ಟರು. ಅಮಾಯಕರನ್ನು ಗುಂಡಿಟ್ಟು ಕೊಂದು, ಅಟ್ಟಹಾಸ ಮೆರೆದಿದ್ದ ಪಾಕ್ ಉಗ್ರರಿಗೆ ತಕ್ಕ ಪಾಠ ಕಲಿಸಲು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ದಾಳಿ ನಡೆಸಿದ ಭಾರತ, ಪಾಕಿಸ್ತಾನ ಉಗ್ರರ 9 ಅಡಗುತಾಣವನ್ನು ಛಿದ್ರಗೊಳಿಸಿತು
ದಾಳಿ ಮೂಲಕ 80ಕ್ಕೂ ಅಧಿಕ ಜನರ ನೆತ್ತರು ಹರಿಸಿರುವ ಭಾರತ ಸೇನೆ, ಉಗ್ರರು ನೆಲೆಸಿದ್ದ ಕಟ್ಟಡಗಳನ್ನು ಧ್ವಂಸಗೊಳಿಸಿದೆ.
ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆ ಇದೀಗ ಭಾರತದ ಒಟ್ಟು 27 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಆದೇಶಿಸಿದೆ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ 27 ವಿಮಾನ ನಿಲ್ದಾಣಗಳನ್ನು ಮುಚ್ಚಲಾಗುವುದು. ಈ ವಿಮಾನ ನಿಲ್ದಾಣಗಳಲ್ಲಿನ ವಿಮಾನ ಸೇವೆಗಳನ್ನು ಶನಿವಾರ (ಮೇ.10) ಬೆಳಗ್ಗೆಯವರೆಗೆ ರದ್ದುಗೊಳಿಸಲಾಗಿದೆ.
ಪ್ರಸ್ತುತ ಒಟ್ಟು 430 ವಿಮಾನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದು, ವಿಮಾನಯಾನ ಸಂಸ್ಥೆಗಳು ಕಾಶ್ಮೀರದಿಂದ ಗುಜರಾತ್‌ಗೆ ವಾಯುವ್ಯ ವಾಯುಪ್ರದೇಶ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇವುಗಳ ಬಳಿಕ ಇನ್ನೂ ಹೆಚ್ಚಿನ ವಿಮಾನ ನಿಲ್ದಾಣಗಳನ್ನು ಮುಚ್ಚುವ ನಿರ್ಧಾರಗಳು ಕೂಡ ಕೇಳಿಬಂದಿವೆ. ಬಹುತೇಕ ವಿದೇಶಿ ವಿಮಾನಯಾನ ಸಂಸ್ಥೆಗಳು ಈಗಾಗಲೇ ಪಾಕಿಸ್ತಾನಿ ವಾಯುಪ್ರದೇಶದತ್ತ ಹಾರಾಟ ನಡೆಸುವುದನ್ನು ಸ್ಥಗಿತಗೊಳಿಸಿದೆ, (ಏಜೆನ್ಸೀಸ್).
ಯಾವೆಲ್ಲ ಏರ್ಪೋರ್ಟ್ಗಳು ತಾತ್ಕಾಲಿಕ ಬಂದ್
1. ಧರ್ಮಶಾಲಾ
2. ಹಿಂಡನ್
3. ಗ್ವಾಲಿಯರ್
4. ಕಿಶನ್ಗಡ್
5. ಶ್ರೀನಗರ
6. ಅಮೃತಸರ
7. ಪಟಿಯಾಲ
8. ಶಿಮ್ಲಾ
9. ಗಗ್ಗಲ್
10. ಜೈಸಲ್ಮೇರ್
11. ಜೋಧಪುರ
12. ಬಿಕಾನೆರ್
13. ಹಲ್ವಾರ
14. ಪಠಾಣ್‌ಕೋಟ್
15. ಜಮ್ಮು
16. ಲೇಹ್
17. ಲುಧಿಯಾನ
18. ಭುಂಟರ್
19. ಭಟಿಂಡಾ
20. ಮುಂದ್ರಾ
21. ಜಾಮ್‌ನಗರ
22. ರಾಜ್ಕೋಟ್
23. ಪೋರಬಂದರ್
24. ಕಾಂಡ್ಲಾ
25. ಕೇಶೋದ್
26. ಭುಜ್
27. ಚಂಡೀಗಢ






