ಮೈಸೂರಿನ ಕ್ಯಾತಮಾರನಹಳ್ಳಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಬಳಿಕ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಇದೀಗ ಮರ್ಡರ್ ಗೆ ಸೇಡು ತೀರಿಸಿಕೊಳ್ಳವ ಉನ್ಮಾದ ಹೆಚ್ಚಾಗಿದೆ.

ಕಾರ್ತಿಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಬೆಂಬಲಿಗರಿಂದ ಸೇಡು ತೀರಿಸಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ವೈರಲ್ ಮಾಡಲಾಗಿದೆ.

ಸದ್ಯ ಜಗದೀಶ್ ಎಂಬ ಹೆಸರಿನ ಖಾತೆಯಿಂದ ಹಾಕಲಾದ ಈ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ತಿ ಕೊಲೆಗೆ ರಿವೇಂಜ್ ತೆಗೆದುಕೊಳ್ಳುತೇವೆ ಅಂತ ಮಾಡಿರುವ ಪೋಸ್ಟ್ ವೈರಲ್ ಆಗಿದೆ. “ಕಾರ್ತಿಕ್ ಕೊಲೆ ಆರೋಪಿಗಳನ್ನು ಹೊಡೆದೇ ಹೊಡೆಯುತ್ತೇವೆ. ನಿಮಗೂ ಬಂತು ಕೇಡುಗಾಲ” ಎಂದು ಪೋಸ್ಟ್ ವೈರಲ್ ಮಾಡಲಾಗಿದೆ. ಆ ಮೂಲಕ ಬೆಂಬಲಿಗರು ಕಾರ್ತಿಕ್ ಕೊಲೆ ಸೇಡು ತೀರಿಸಿಕೊಳ್ಳುತ್ತಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

Leave a Reply

Your email address will not be published. Required fields are marked *

Join WhatsApp Group
error: Content is protected !!