ಪುತ್ತೂರು; ಪುತ್ತೂರಿನ `ವಿದ್ಯಾರ್ಥಿ’ಯಿಂದ ವಿದ್ಯಾರ್ಥಿನಿಗೆ ಗರ್ಭದಾನ.. ಹೀಗೊಂದು ಸುದ್ದಿ ಕಳೆದ ಕೆಲ ದಿನಗಳಿಂದ ಪುತ್ತೂರಿನಲ್ಲಿ ವೈರಲ್ ಆಗುತ್ತಿದೆ. ಇದಕ್ಕೂ ಹೆಚ್ಚಿನ `ಅಚ್ಚರಿ’ ಹುಟ್ಟಿಸಿರುವುದು ಈ ವಿದ್ಯಾರ್ಥಿಯ ತಂದೆ ಪ್ರಮುಖ ರಾಜಕೀಯ ಪಕ್ಷವೊಂದರ ಮುಖಂಡರಾಗಿರುವ ವಾಸ್ತುತಜ್ಞ. ಪಾಪ…! ವಾಸ್ತುತಜ್ಞನ ಮನೆಯಲ್ಲಿಯೇ ವಾಸ್ತು ಅಸ್ತವ್ಯಸ್ತವಾಗಿರುವುದು ಪುತ್ತೂರಿನ ಜನತೆ ಮುಸಿ ಮುಸಿ ನಗುವಂತೆ ಮಾಡಿದೆ.
ಠಾಣೆ ಮೆಟ್ಟಲೇರಿದ ವಿದ್ಯಾರ್ಥಿನಿ..
ವಿದ್ಯಾರ್ಥಿಯಿಂದ ಅಕ್ರಮ ಗರ್ಭದಾನಕ್ಕೆ ಒಳಗಾದ ವಿದ್ಯಾರ್ಥಿನಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಮೆಟ್ಟಲೇರುತ್ತಿರುವಂತೆ ಈ ಅಕ್ರಮ ಸಂಬAಧದ ವಿಚಾರ ಬೆಳಕಿಗೆ ಬಂದಿದೆ. 7 ತಿಂಗಳ ಗರ್ಭವತಿಯಾಗಿದ್ದಾಳೆ ಎನ್ನಲಾದ ಈ ವಿದ್ಯಾರ್ಥಿನಿ ಠಾಣೆಗೆ ದೂರು ಕೊಟ್ಟಿರುವುದು ಕಂಡು ಬೆಚ್ಚಿಬಿದ್ದ ವಿದ್ಯಾರ್ಥಿಯ ಕುಟುಂಬವೂ ಠಾಣೆಗೆ ಓಡಿಕೊಂಡು ಬಂದಿದೆ. ಅಲ್ಲೊಂದು ಮಾತುಕತೆ ನಡೆದಿದೆ ಎನ್ನಲಾಗಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳುವುದಕ್ಕೆ ತಡೆ ಬಿದ್ದಿದೆ ಎಂಬ ಸುದ್ದಿ ಹರಡಿದೆ.
ರಾಜಕಾರಣಿ ಮಧ್ಯಸ್ತಿಕೆ..!
ಪುತ್ರನ ಈ `ಕಿತಾಪತಿ’ ಯಿಂದ ತಲೆ ಕೆಡಿಸಿಕೊಂಡ ರಾಜಕೀಯ ಮುಖಂಡ ಪುತ್ತೂರಿನ ಪ್ರಭಾವಿ ರಾಜಕಾರಣಿಯೊಬ್ಬರ ಬೆನ್ನಿಗೆ ಬಿದ್ದು ಹೇಗಾದರೂ ಮಾಡಿ ಇದು ಕೇಸಾಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ರಾಜಕಾರಣಿಯ ಮಧ್ಯಸ್ತಿಕೆಯ ಪರಿಣಾಮ ವಿದ್ಯಾರ್ಥಿಗೆ ಮದುವೆ ವಯಸ್ಸು ಆದ ತಕ್ಷಣ ಗರ್ಭವತಿಯಾದ ವಿದ್ಯಾರ್ಥಿನಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಹಾಗಾಗಿ ಪ್ರಕರಣ ದಾಖಲಾಗಿಲ್ಲ ಎಂಬ ಬಗ್ಗೆಯೂ ಪಿಸು ಮಾತುಗಳು ಕೇಳಿಬರುತ್ತಿದೆ. ತಮಾಷೆ ಅಂದರೆ ವಿದ್ಯಾರ್ಥಿಯ ತಂದೆಯ ಬೆನ್ನಿಗೆ ನಿಂತದ್ದು ಅವರ ಮನೆಯ ಮುಖಂಡರಲ್ಲ. ಪಕ್ಕದ ಮನೆಯ ರಾಜಕಾರಣಿ..!
ಮದುವೆ ಯಾವಾಗ..
ಮದುವೆಯ ಬಗ್ಗೆ ಠಾಣೆಯಲ್ಲಿ ಮಾತನಾಡುವ ಸಂದರ್ಭ ವಿದ್ಯಾರ್ಥಿ ತಾನು ಅವಳ ಜತೆಗೆ ೫ ತಿಂಗಳ ಹಿಂದೆಯಷ್ಟೇ ಸೇರಿದ್ದೆ. ಆದರೆ ಆಕೆಗೆ ಏಳು ತಿಂಗಳಾಗಿದೆ ಎಂದು ಜಾರಿಕೊಳ್ಳುವ ಪ್ರಯತ್ನವೂ ನಡೆದಿತ್ತು ಎನ್ನಲಾಗಿದೆ. ಆದರೆ ವಿದ್ಯಾರ್ಥಿನಿ ಕುಟುಂಬ ಪಟ್ಟು ಹಿಡಿದ ಕಾರಣ ಇನ್ನು ಕೆಲವೇ ದಿನಗಳಲ್ಲಿ ಮದುವೆ ವಯಸ್ಸು ತುಂಬುವ ವಿದ್ಯಾರ್ಥಿ ಜತೆಗೆ `ಮದುವೆ’ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ನಡುವೆ ಪ್ರಸ್ತುತ 7 ತಿಂಗಳ ಗರ್ಭಿಣಿಯಾಗಿರುವ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಬಳಿಕ ಮದುವೆ ಮಾಡೋಣ ಎನ್ನುವ ಮಾತಿಗೂ ವಿದ್ಯಾರ್ಥಿನಿ ಕುಟುಂಬ ಸ್ಪಂಧಿಸಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಮದುವೆಯಾಗೋದು ಅಂತೂ ಗ್ಯಾರಂಟಿ.. ಇದಕ್ಕೆ ಮಧ್ಯಸ್ತಿಕೆ ವಹಿಸಿರುವ `ರಾಜಕಾರಣಿ’ ಗ್ಯಾರಂಟಿ ನೀಡಿದ್ದಾರೆ ಎನ್ನುವ ಸುದ್ದಿ ಸತ್ಯವೋ ಸುಳ್ಳೋ ಗೊತ್ತಿಲ್ಲ..

Leave a Reply

Your email address will not be published. Required fields are marked *

Join WhatsApp Group
error: Content is protected !!