ವಿವಾಹಿತ ಮಹಿಳೆಯನ್ನು 17 ಬಾರಿ ದೇಹದ ವಿವಿಧ ಕಡೆ ಚಾಕುವಿನಿಂದ ಇರಿದು (stabbing) ಪ್ರಿಯಕರ ಬರ್ಬರವಾಗಿ ಹತ್ಯೆ (kill) ಮಾಡಿರುವಂತಹ ಘಟನೆ ಪೂರ್ಣ ಪ್ರಜ್ಞಾಲೇಔಟ್ನ ಹೋಟೆಲ್ ಓಯೋ ರೂಮ್ನಲ್ಲಿ ನಡೆದಿದೆ. ಟೆಕ್ಕಿ ಯಶಸ್ ಎಂಬಾತನಿಂದ ಹರಿಣಿ(36) ಹತ್ಯೆಗೈಯಲಾಗಿದೆ.

ಮೃತ ಹರಿಣಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ಯಶಸ್ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಸದ್ಯ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

ನಡೆದದ್ದೇನು?

ಗೃಹಿಣಿ ಹರಿಣಿ ಇದ್ದ ಏರಿಯಾಗೆ ಜಾತ್ರೆಗೆ ಟೆಕ್ಕಿ ಯಶಸ್ ಹೋಗಿದ್ದರು. ಈ ವೇಳೆ ಹರಿಣಿ ಪರಿಚಯವಾಗಿ ಫೋನ್ ನಂಬರ್ ಪಡೆದಿದ್ದರು. ಬಳಿಕ ಸ್ನೇಹ ಬೆಳೆದು ಚಾಟಿಂಗ್, ಡೇಟಿಂಗ್, ಸುತ್ತಾಟ ಮಾಡಿದ್ದರು. ಕೆಲವು ಸಲ ಇಬ್ಬರು ಲೈಂಗಿಕ ಸಂಪರ್ಕ ಕೂಡ ಬೆಳೆಸಿದ್ದರು. ಹಲವು ಬಾರಿ ಇದೇ ರೀತಿ ಭೇಟಿಯಾಗಿ ಫೋನ್ನಲ್ಲಿ ಮಾತಾಡುತ್ತಿದ್ದರು. ಈ ವೇಳೆ ಪತಿ ದಾಸೇಗೌಡನಿಗೆ ಪತ್ನಿಯ ಅನೈತಿಕ ಸಂಬಂಧ ಗೊತ್ತಾಗಿತ್ತು. ಹರಿಣಿ ಫೋನ್ ಕಿತ್ಕೊಂಡಿದ್ದ ದಾಸೇಗೌಡ ಮನೆಯಲ್ಲೇ ಕೂಡಿ ಹಾಕಿದ್ದರು.

ಬಳಿಕ ಕೆಲವು ತಿಂಗಳ ನಂತರ ಮತ್ತೆ ಹೊರ ಬಂದಿದ್ದ ಹರಿಣಿ, ಈ ವೇಳೆ ಹರಿಣಿ ತನ್ನ ಬಾಯ್ಫ್ರೆಂಡ್ ಯಶಸ್ ಸಂಪರ್ಕಿಸಿದ್ದಾರೆ. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದ ಪ್ರಿಯಕರ ಯಶಸ್, ಸಿಕ್ಕರೇ ಸಾಯಿಸಲು ನಿರ್ಧರಿಸಿದ್ದ. ಹೀಗಾಗಿ ಹರಿಣಿಯನ್ನು ಕೊಲೆ ಮಾಡಲು ಚಾಕು ಕೂಡ ಖರೀದಿಸಿದ್ದ.

ಜೂನ್ 6ರಂದು ಮಾತುಕತೆ ನಡೆಸಿ ಇಬ್ಬರು ಹೋಟೆಲ್ಗೆ ಹೋಗಿದ್ದರು. ಮೊದಲೇ ರಾಯಲ್ಸ್ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದ ಯಶಸ್, ಹೋಟೆಲ್ಗೆ ಹೋಗಿ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಚಾಕುವಿನಿಂದ ಇರಿದು ಹರಿಣಿಯನ್ನು ಹತ್ಯೆಗೈಯಲಾಗಿದೆ. ವಿಷಯ ತಿಳಿದು ಹೋಟೆಲ್ಗೆ ಭೇಟಿ ನೀಡಿದ್ದ ಸುಬ್ರಹ್ಮಣ್ಯಪುರ ಪೊಲೀಸರು, ಬಳಿಕ ಎಫ್ಎಸ್ಎಲ್ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇತ್ತ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹರಿಣಿ ಅವೈಡ್ ಮಾಡಿದ್ದಕ್ಕೆ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

Leave a Reply

Your email address will not be published. Required fields are marked *

Join WhatsApp Group
error: Content is protected !!