
ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನ ದುರಂತಕ್ಕೆ ದೇಶವೇ ಬೆಚ್ಚಿಬಿದ್ದಿದೆ. ಇದರ ಬೆನ್ನಲ್ಲೇ 15 ವರ್ಷಗಳ ಹಿಂದೆ ಅಂದ್ರೆ 2010ರ ಮೇ 22 ರಂದು ಮಂಗಳೂರಿನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ 812 ವಿಮಾನ ದುರಂತವನ್ನು ನೆನಪಿಸಿದೆ.
ಈ ದುರಂತದಲ್ಲಿ ಒಟ್ಟು 158 ಜನ ಮೃತಪಟ್ಟಿದ್ದರು.
ಈ ದುರ್ಘಟನೆಯಲ್ಲಿ ವಿಮಾನ ವೇಗವಾಗಿ ನೆಲಕ್ಕೆ ಅಪ್ಪಳಿಸಿದ್ದರಿಂದ ಸ್ಫೋಟ ಸಂಭವಿಸಿ ಪ್ರಯಾಣಿಕರೆಲ್ಲ ಸಜೀವ ದಹನಗೊಂಡಿದ್ದರು. ಹೀಗಾಗಿ ಈ ಕೇಸ್ ನಲ್ಲೂ ಕೂಡ ಮೃತದೇಹಗಳ ಗುರುತು ಪತ್ತೆಹೊಚ್ಚೋದು ಸವಾಲಾಗಿ ಪರಿಣಮಿಸಿತ್ತು.ಹೀಗಾಗಿ
ಮೃತ 12 ಮಂದಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.
ಈ ದುರಂತದಲ್ಲಿ ಮೃತಪಟ್ಟ 158 ಜನ ಪೈಕಿ
22 ಜನರ ಗುರುತು ಪತ್ತೆ ಮಾಡಲು ಸಾಧ್ಯವಾಗದ ಕಾರಣ DNA ಪರೀಕ್ಷೆ ಮಾಡಲಾಯಿತು. ಅಂತಿಮವಾಗಿ ಈ 22 ಮಂದಿಯಲ್ಲಿ 10 ಜನರ ಗುರುತು ಪತ್ತೆ ಮಾಡಲು ಮಾತ್ರ ಸಾಧ್ಯವಾಗಿತ್ತು.ಆದ್ರೆ ಉಳಿದ 12 ಜನರ ಮೃತದೇಹದ ಐಡೆಂಟಿಫಿಕೇಷನ್ ಸಾಧ್ಯವಾಗದೇ ಕುಟುಂಬಸ್ಥರ ಅನುಮತಿ ಪಡೆದು ಸರ್ಕಾರಿ ಗೌರವದೊಂದಿಗೆ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.






