ದ ಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಇದೀಗ ವಾಮಂಜೂರು ಸಮೀಪದ ಕತ್ತಿಕಲ್ ನ ಮಂಗಳೂರು – ಮೂಡಬಿದ್ರೆ – ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರ ರಸ್ತೆ ಅಭಿವೃದ್ಧಿಗಾಗಿ ಕಾಮಗಾರಿ ನಡೆದ ಸ್ಥಳದಲ್ಲಿ ಗುಡ್ಡ ಕುಸಿತ ಉಂಟಾಗಿದೆ.

ವಾಮಂಜೂರಿನಿಂದ ಗುರುಪುರದ ಕಡೆಗೆ ತೆರಳುವ ರಸ್ತೆಯ ಒಂದು ಭಾಗದಲ್ಲಿ ಗುಡ್ಡ ಕುಸಿದಿದ್ದು, ಮುನ್ನೆಚ್ಚರಿಕ ಕ್ರಮವಾಗಿ ರಸ್ತೆಯ ಒಂದು ಭಾಗದಲ್ಲಿ ಸಂಚಾರ ನಿಷೇಧಿಸಲಾಗಿದೆ. ಇನ್ನು ಗುಡ್ಡ ಕುಸಿಯದಂತೆ ಸಾಯಿಲ್ ನೈಲಿಂಗ್ ಮಾಡಿದ್ದರೂ ಕೂಡ ಕುಸಿದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ಹಿಂದೆ ಅಂದರೆ ಮುಂಗಾರು ಮಳೆ ಆರಂಭಕ್ದ ವೇಳೆ ಇದೇ ಜಾಗದಲ್ಲಿ ಗುಡ್ಡ ಕುಸಿದಿತ್ತು, ಇದೀಗ ನಿನ್ನೆ ತದರಾತ್ರಿ ಮತ್ತೆ ಕುಸಿದಿದ್ದು, ಸದ್ಯ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ರಸ್ತೆಗೆ ಬಿದ್ದ ಮಣ್ಣು ತೆರವು ಕಾರ್ಯನಡೆಸಲಾಗುತ್ತಿದೆ.

ಇನ್ನು ಗುಡ್ಡ ಕುಸಿದಿರುವ ಜಾಗದಲ್ಲಿ ಮತ್ತಷ್ಟು ಮಣ್ಣು ಹಗುರವಾಗಿದ್ದು, ಮರಗಳ ಜೊತೆಗೆ ಮತ್ತೆ ಕುಸಿಯುವ ಸಾಧ್ಯತೆ ಇದೆ. ಈ ಹಿನ್ನಲೆ ಮುನ್ನೆಚ್ಚರಿಕ ಕ್ರಮವಾಗಿ ರಸ್ತೆಯ ಒಂದು ಭಾಗದಲ್ಲಿ ಸಂಚಾರ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!