
ಪುತ್ತೂರು: ಪ್ರಗತಿ ಪಾರಾಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್‌ನಲ್ಲಿ ನಡೆದ ಯೋಗ ದಿನಾಚರಣೆ ಉದ್ಘಾಟಿಸಿದ ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷಡಾ.ಯು ಶ್ರೀಪತಿ ರಾವ್ ಹಾಗೂ SPSS ಪುತ್ತೂರು ತಾಲೂಕು ವರದಿಗಾರ ಲಕ್ಷ್ಮೀಕಾಂತ್ ಯೋಗದ ಮಹತ್ವ ತಿಳಿಸಿದರು. SPSS ಘಟಕದ ಯೋಗ ಶಿಕ್ಷಕ ಅಶೋಕ್ ಎಂ. ಯೋಗ ಪ್ರಾತ್ಯಕ್ಷಿಕೆಯೊಂದಿಗೆ ಯೋಗ ತರಗತಿ ನಡೆಸಿಕೊಟ್ಟರು. ಸಂಸ್ಥೆಯ ಆಡಳಿತಧಿಕಾರಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ದೀಕ್ಷಾಯಿನಿ ಮತ್ತು ಅನ್ನತ್ ಬೀಬಿ ಪ್ರಾರ್ಥಿಸಿ, IDMLT ವಿದ್ಯಾರ್ಥಿಗಳಾದ ಮೇಘಶ್ರೀ ಕಾರ್ಯಕ್ರಮ ನಿರೂಪಿಸಿ, ರಕ್ಷಿತಾ ವಂದಿಸಿದರು.







