ಪುತ್ತೂರು ತಾಲೂಕು ಮುಂಡೂರು ಗ್ರಾಮದ ಸುರೇಶ್ ಗೌಡ ರವರ ನಿವಾಸದ ಸಮೀಪದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಗುಡ್ಡ ಕುಸಿತಗೊಳಗಾಗಿದ್ದು, ಪರಿಣಾಮವಾಗಿ ಮನೆಯ ಹತ್ತಿರವಿದ್ದ ಬಾವಿಯು ಮಣ್ಣಿನಲ್ಲಿ ಮುಚ್ಚಿ ಹಾನಿಯುಂಟಾಗಿದೆ. ಇನ್ನು ಸುತ್ತಮುತ್ತಲಿನ ಪ್ರದೇಶದಲ್ಲೂ ಮಣ್ಣು ಜರಿದಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿ ಕಿರಣ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಮುಂಡೂರು ಮತ್ತು ಅಜ್ಜಿಕಟ್ಟೆ ತುರ್ತು ಸೇವಾ ಸಮಿತಿಯ ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ, ಕಾರ್ಯದರ್ಶಿ ಆಶ್ರಫ್ ಮುಲಾರ್, ಬೂತ್ ಅಧ್ಯಕ್ಷ ಪದ್ಮಯ್ಯ ಬಂಡಿಕಾನ, ವಲಯ ಉಪಾಧ್ಯಕ್ಷ ರಜಾಕ್ ಮುಲಾರ್, ಯೂತ್ ಅಧ್ಯಕ್ಷ ಆಸೀಫ್ A. R., ಅಲ್ಪಸಂಖ್ಯಾತ ಬ್ಲಾಕ್ ಸಂಘಟನಾ ಕಾರ್ಯದರ್ಶಿ ಹಸೈನಾರ್ ಸಂತೋಷ ಹಾಗೂ ತುರ್ತು ಸೇವಾ ಸಮಿತಿ ಅಧ್ಯಕ್ಷ ಉಸ್ಮಾನ್ ಅಜ್ಜಿಕಟ್ಟೆ ಉಪಸ್ಥಿತರಿದ್ದು ಸಮೀಕ್ಷೆ ನಡೆಸಿದರು.

ಇದೇ ಸಂದರ್ಭದಲ್ಲಿ ಸ್ಥಳೀಯರು ಅರುಣ್ ಕುಮಾರ್ ಪಟ್ಟೆ, ಮಾಯಾಜ್ ಮುಲಾರ್, ಇಸಾಕ್ ಅಂಬಾಟ, ನಝೀರ್, ಅಸೀಮ್, ಮುಫಿಜ್ ಮುಲಾರ್ ಮೊದಲಾದವರು ಸಹಕಾರ ನೀಡಿದ್ದು, ನಿರೀಕ್ಷಿತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!