ಬೆಂಗಳೂರು: ಚಾಲಕ ರಹಿತ (ಡ್ರೈವರ್‌ಲೆಸ್) ಕಾರಿನ ಕುರಿತು ನಾವು ಕೇಳಿದ್ದೆವು. ಆದರೆ ಈಗ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರು ಸ್ವತಃ ಅಮೇರಿಕಾದ ರಸ್ತೆಯಲ್ಲಿ ಇಂತಹ ಕಾರಿನಲ್ಲಿ ಪ್ರಯಾಣಿಸಿದ ದೃಶ್ಯಗಳು ವೈರಲ್ ಆಗಿವೆ.

ಅಮೇರಿಕಾದ ಬೋಸ್ಟನ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಪೀಕರ್‌ಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಯು.ಟಿ ಖಾದರ್ ಹಾಗೂ ಕೆಲ ಶಾಸಕರ ತಂಡ ಭೇಟಿ ನೀಡಿದ್ದು, ಈ ವೇಳೆ ಸ್ಥಳೀಯವಾಗಿ ಚಾಲಕರಿಲ್ಲದ ಆಧುನಿಕ ಕಾರಿನಲ್ಲಿ ಅವರು ಪ್ರಯಾಣಿಸಿದರು. ಆ ವೇಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರ ಗಮನ ಸೆಳೆಯುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಈ ಕಾರುಗಳು ನಿರ್ದಿಷ್ಟ ಮಾರ್ಗದಲ್ಲಿ ಚಾಲಕನ ಸಹಾಯವಿಲ್ಲದೇ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಭಾರತೀಯ ನಾಯಕರುಗಳು ಈ ರೀತಿಯ ಅನುಭವವನ್ನು ಹಂಚಿಕೊಳ್ಳುತ್ತಿರುವುದು ಹೊಸ ತಂತ್ರಜ್ಞಾನಗಳ ಬಗ್ಗೆ ಮನೋಧರ್ಮ ಬದಲಾಗುತ್ತಿರುವುದಕ್ಕೂ ನಿದರ್ಶನವಾಗಿದೆ

View this post on Instagram

A post shared by Vidyamaana news (@vidyamaannews)

Leave a Reply

Your email address will not be published. Required fields are marked *

Join WhatsApp Group
error: Content is protected !!