
ಮಂಗಳೂರು, ಆ.8 – ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳಜ್ಯೋತಿ ಜಂಕ್ಷನ್ ಬಳಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವಾಮಂಜೂರು ನಿವಾಸಿ ಬದ್ರುದ್ದೀನ್ (35) ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 2 ಕೆ.ಜಿ. ಗಾಂಜಾ, ₹20,000 ನಗದು, ಒಂದು ಮೊಬೈಲ್ ಫೋನ್ ಹಾಗೂ ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ಗವಿರಾಜು ಆರ್.ಪಿ., ಎಸ್ಸೆ ಅರುಣ್ ಕುಮಾರ್ ಡಿ, ಹೆಡ್‌ಕಾನ್ಸ್ಟೆಬಲ್‌ಗಳು ಕಮಲಾಕ್ಷ, ಶಶಿಧರ್, ಶಂಕ್ರಪ್ಪ ಹಾಗೂ ಪಿಸಿಗಳಾದ ಸಿಕಂದರ್, ಬೀರೇಂದ್ರ, ಪ್ರದೀಪ್ ಭಾಗವಹಿಸಿದ್ದರು.






