
ವಿದ್ಯಾರ್ಥಿನಿಯನ್ನು (Student) ಓಡಿಸಿಕೊಂಡು ಹೋಗಿದ್ದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ (45) ವಿದ್ಯಾರ್ಥಿನಿಯನ್ನು ಓಡಿಸಿಕೊಂಡು ಹೋಗಿದ್ದ ಶಿಕ್ಷಕ. ಪ್ರವೀಣ್ ಕಳೆದ 15 ವರ್ಷಗಳಿಂದ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ( Doddaballapur ) ನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾನೆ.
ಪ್ರಾಧ್ಯಾಪಕ ಪ್ರವೀಣ್ಗೆ ಈಗಾಗಲೇ ಮದುವೆಯಾಗಿದ್ದರೂ, ಕಾಲೇಜಿನ ಓರ್ವ ವಿದ್ಯಾರ್ಥಿನಿಯ ಜೊತೆ ಪರಸಂಗ ಬೆಳೆಸಿದ್ದಾನೆ.
ವಿದ್ಯಾರ್ಥಿನಿಯ ಪೋಷಕರು ಆಕೆಗೆ ಮದುವೆ ನಿಶ್ಚಯ ಮಾಡಿದ್ದರು. ಈ ವಿಚಾರ ತಿಳಿದ ಪ್ರಾಧ್ಯಾಪಕ ಪ್ರವೀಣ್ ಆಗಸ್ಟ್ 2 ರಂದು ವಿದ್ಯಾರ್ಥಿನಿಯನ್ನು ಓಡಿಸಿಕೊಂಡು ಹೋಗಿದ್ದಾನೆ. ಇಬ್ಬರೂ ಮೊದಲಿಗೆ ದೆಹಲಿಗೆ ಹೋಗಿದ್ದಾರೆ. ಅಲ್ಲಿಂದ ವಾಪಸ್ ನಂಜನಗೂಡಿಗೆ ಬಂದಿದ್ದಾರೆ. ನಂಜನಗೂಡಿನಲ್ಲಿನ ಲಾಡ್ಜ್ನಲ್ಲಿ ಇಬ್ಬರೂ ತಂಗಿದ್ದರು.
ಇತ್ತ ಪ್ರವೀಣ್ ಪತ್ನಿ ಮತ್ತು ವಿದ್ಯಾರ್ಥಿನಿಯ ಪೋಷಕರು ದೊಡ್ಡಬಳ್ಳಾಪುರ ಮಹಿಳಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೆರೆಗೆ ಪ್ರಕರಣ ದಾಖಲಿಸಿಕೊಂಡ ದೊಡ್ಡಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ಆರೋಪಿ ಪ್ರವೀಣ್ನನ್ನು ಬಂಧಿಸಿದ್ದಾರೆ.






