ಪುತ್ತೂರು: ಮಾನ್ಯ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಕಿರಣ್ ಜಾನ್ಸನ್ ಡಿಸೋಜಾ ರವರ ಮಾರ್ಗದರ್ಶನದಲ್ಲಿ, ನಗರ ಠಾಣಾ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಮತ್ತು ಶೇಷಮ್ಮ ಕೆ.ಎಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ನ್ಯಾಯಾಲಯ ಸಿಬ್ಬಂದಿ ಸಿಪಿಸಿ 2329 ಪ್ರಭಾಕರ್ ಮೋರೆ ಹಾಗೂ ಸಿಬ್ಬಂದಿಗಳಾದ ಸಿಎಚ್‌ಸಿ 413 ಸಂತೋಷಕುಮಾರ್ ಎ., ಸಿಪಿಸಿ 2278 ಶಿವಕುಮಾರ್ ನಾಯ್ಕ್ ಮತ್ತು ಸಿಪಿಸಿ 2283 ಶ್ರೀಶೈಲ ಎಂ.ಕೆ ರವರ ಸಹಕಾರದಲ್ಲಿ, ಆಗಸ್ಟ್ 23ರಂದು ಮಂಗಳೂರಿನ ಕೋಡಿಯಾಲಬೈಲ್ ಪ್ರದೇಶದಿಂದ ವಾರಂಟ್ ಆಸಾಮಿ ಅಕ್ಬರ್ ಸುಹೈಬ್ (ತಂದೆ: ಅಬ್ದುಲ್ ಮಜೀದ್) ಅವರನ್ನು ಬಂಧಿಸಲಾಯಿತು.

ಅವರು ಪುತ್ತೂರು ನಗರ ಠಾಣಾ ಅಕ್ರ 10/2020 ಹಾಗೂ ಮಾನ್ಯ ಪುತ್ತೂರು ನ್ಯಾಯಾಲಯದ ಸಿಸಿ ನಂಬ್ರ 490/2020 ಪ್ರಕರಣದಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಬಂಧಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!